ಊಟಕ್ಕೆಂದು ಕೇವಲ 6 ರೂ. ಖರ್ಚು ಮಾಡುತ್ತಿದ್ದ ಈತ ಇಂದು ಸ್ಟಾರ್ ಹೀರೋ..! ಈತನ ಕಷ್ಟದ ದಿನಗಳ ಬಗ್ಗೆ ಕೇಳಿದ್ರೆ ಕಣ್ಣೀರು ಬರೋದು ಗ್ಯಾರಂಟಿ
ಒಬ್ಬ ವ್ಯಕ್ತಿ ಇಂದು ಒಳ್ಳೆಯ ಜಾಗದಲ್ಲಿ ಇರುತ್ತಾರೆ ಎಂದರೆ ಅದರ ಹಿಂದೆ ಒಂದು ಪರಿಶ್ರಮ ಇರುತ್ತೆ. ಅಷ್ಟೆ ಅಲ್ಲ ಆ ಜಾಗಕ್ಕೆ ಬರಲು ಆತ ಎಷ್ಟು ಕಷ್ಟದ ದಿನಗಳನ್ನು ಎದುರಿಸಿರುತ್ತಾನೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇದಕ್ಕೆ ಉದಾಹರನೆಯಂತೆ ಇಲ್ಲೊಬ್ಬ ಸ್ಟಾರ್ ನಟ ಇಂತಹ ಹಲವಾರಿ ಕಷ್ಟಗಳನ್ನು ಎದುರಿಸಿ ತಿನ್ನಲು ಗತಿ ಇಲ್ಲದೆ ಸ್ಟಾರ್ ನಟನಾಗಿ ಇಂದು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ಜಾನ್ ಅಬ್ರಹಾಮ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಶನದಲ್ಲಿ ತಾವು ಸಿನಿಮಾ ರಂಗಕ್ಕೆ ಬರುವ ಮುಂಚೆ ಅನುಭವಿಸಿದ ಕಷ್ಟದ ದಿನಗಳ ಕುರಿತು ಹಂಚಿಕೊಂಡರು.
ಜಾನ್ ಅಬ್ರಹಂ ಇಂದು ಒಂದು ಸಿನಿಮಾಗೆ ಕೋಟಿ ಕೋಟಿ ಸಂಬಾವನೆ ಪಡೆಯ ಬಹುದು ಆದರೆ, ಒಂದು ಕಾಲದಲ್ಲಿ ಈತನಿಗೆ ಬರುತ್ತಿದ್ದ ಸಂಬಳ ಎಷ್ಟು ಗೊತ್ತಾ..? ಮುಂದೆ ಓದಿ...
ಜಾನ್ ಅಬ್ರಹಂ ಎಂಬಿಎ ಪದವಿದರರಾಗದ್ದು, ಶಿಕ್ಷಣ ಮುಗಿಸಿ ನಟ ಮಾಧ್ಯಮ ಯೋಜಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರಂತೆ.
ಈ ಕೆಲಸ ಮಾಡಲು ನಟನಿಗೆ ಸಿಗುತ್ತಿದ್ದ ಸಂಬಳ ಕೇವಲ 6500 ರೂ ಮಾತ್ರವೇ ಆಗಿತ್ತಂತೆ.
ಹೀಗೆ 6500 ರೂ. ಗೆ ಕೆಲಸ ಮಾಡುವ ಸಂದರ್ಭದಲ್ಲಿ ಗ್ಲಾಡ್ರಾಗ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಬಂದಿತ್ತಂತೆ ಈ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಗೌರಿ ಖಾನ್ ಹಾಗೂ ಕರಣ್ ಜೋಹರ್ ಅವರು ತೀರ್ಪುಗಾರರಾಗಿದ್ದರಂತೆ.
ಈ ಸ್ಪರ್ಧೆಯಲ್ಲಿ ಜಾನ್ ಅಬ್ರಹಂ 40000 ರೂ ಗೆದ್ದಿದ್ದರಂತೆ ಇದರ ಕುರಿತು ಮಾತನಾಡಿದ ಜಾನ್ ಅಬ್ರಹಂ " ಈ ಸ್ಪರ್ಧೆಯಲ್ಲಿ ನಾನು 40000 ರೂ. ಗೆದ್ದುಕೊಂಡಿದ್ದೆ ಆಗಿನ ಸಮಯಕ್ಕೆ ಈ ಹಣ ನನಗೆ ಬಹಳ ಮುಖ್ಯವಾಗಿತ್ತು, ಇದು ನಾನು ನನ್ನ ಜೀವನದಲ್ಲಿ ಮೊದಲ ಭಾರಿಗೆ ಗಳಿಸಿದ್ದ ಬಹು ಮೊತ್ತವಾದ ಹಣವಾಗಿತ್ತು."
ನಂತರ ಸಂಬಳವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾನ್ ಅಬ್ರಹಂ " ಆಗಿನ ಸಮಯದಲ್ಲಿ ನಾನು ಅತೀ ಕಡಿಮೆ ಖರ್ಚು ಮಾಡುತ್ತಿದೆ, ನಾನು ಆಹಾರಕ್ಕೆ ಕೇವಲ 6 ರೂ. ಅಷ್ಟೆ ಖರ್ಚು ಮಾಡುತ್ತಿದೆ. 2 ಚಪಾತಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ, ನಂತರ ತಡರಾತ್ರಿ ವರೆಗೂ ಕೆಲಸ ಮಾಡುತ್ತಿದ್ದ ಕಾರನ ಊಟ ಮಾಡಲು ಸಮಯ ಸಿಗುತ್ತಿರಲಿಲ್ಲ, ಕೇವಲ ಒಂದು ಹೊತ್ತು ಊಟ ಮಾಡಿ ಕಾಲ ದೂಡುತ್ತಿದ್ದೆ" ಎಂದರು.
ಕೆಲಸಕ್ಕೆ ಹೋಗುತ್ತಿದ್ದ ಜಾನ್ ಅವರ ಬಳಿ ಆಗಿನ ಕಾಲಕ್ಕೆ ಒಂದು ಬೈಕ್ ಇತ್ತಂತೆ ಅದಕ್ಕೆ ಪೆಟ್ರೊಲ್ ಆಕುವುದೊಂದೇ ಅವರಿಗಿದ್ದ ಖರ್ಚು ಎಂದು ಜಾನ್ ಹೇಳಿದ್ದಾರೆ.
"ನನ್ನ ಬಳಿ ಮೊಬೈಲ್ ಫೋನ್ ಏನು ಇರಲಿಲ್ಲ, ರೈಲಿನಲ್ಲಿ ಪಯಣಿಸಲು ರೈಲು ಪಾಸ್ ಇತ್ತು ಅಷ್ಟೆ ಅದು ಬಿಟ್ಟರೆ ನಾನು ಸಂಪಾದಿಸಿ ಉಳಿದ ಹಣವನ್ನೂ ನಾನು ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೆ" ಎಂದು ಜಾನ್ ಅಬ್ರಹಂ ಹೇಳಿದ್ದಾರೆ
ಈ ರೀತಿ ಅವರು ಸಂಪಾದಿಸುತ್ತಿದ್ದ ಹಣವನ್ನು ಹೇಗೆ ಪ್ರಯೋಜನ ಮಾಡುತ್ತಿದ್ದರು ಎಂದು ಹೇಳುತ್ತಾ ಜಾನ್ ಅಬ್ರಹಂ ಸಂಪಾದಿಸಿದ ಹಣವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಅದರ ಮಹತ್ವ ಏನು ಎಂಬುದನ್ನು ಒತ್ತಿ ಹೇಳಿದ್ದಾರೆ.
ಹೀಗೆ ತಮ್ಮ ಮೊದಲನೆಯ ಸಂಬಳದ ಕುರಿತು ನೆನಪಿಸಿಕೊಳ್ಳುತ್ತಾ ತಮ್ಮ ಕಷ್ಟದ ದಿನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.