WWE ಗೆ ವಿದಾಯ ಹೇಳಿದ ಜಾನ್ ಸೀನ..!

Sun, 07 Jul 2024-2:03 pm,

John Cena: WWE ಯಾರಿಗೆ ಗೊತ್ತಿಲ್ಲ ಹೇಳಿ. 90s ಕಿಡ್ಸ್‌ಗಂತೂ ಈ ಪ್ರೋಗ್ರಾಮ್‌ ಫೇವರೆಟ್‌ ಅಂತಲೇ ಹೇಲಬಹುದು. ಅಂತಹಾ WWE ಅಭಿಮಾನಿಗಳಿಗೆ ಇದೀಗ ಬ್ಯಾಡ್‌ ನ್ಯೂಸ್‌ ಒಂದು ಸಿಕ್ಕಿದೆ. WWE ನಲ್ಲಿ ಎಲ್ಲರ ಪೇವರೆಟ್‌ ಆಗಿದ್ದ ಜಾನ್‌ ಸೀನ ವಿದಾಯ ಹೇಳುವುದಾಗಿ ಹೇಳಿದ್ದಾರೆ.  

ಮುಂದಿನ ವರ್ಷ 'ರೆಸಲ್‌ಮೇನಿಯಾ 41' ನಡೆಯಲಿದೆ ಇದು ತಮ್ಮ ಕೊನೆಯ ಆಟವಾಗಿದ್ದು, ಇದರೊಂದಿಗೆ ತಾವು ಆಟಕ್ಕೆ ವಿದಾಯ ಹೇಳುವುದಾಗಿ ಜಾನ್‌ ಸೀನ  ಬಹಿರಂಗಪಡಿಸಿದ್ದಾರೆ.  

2001ರಲ್ಲಿ ಕುಸ್ತಿ ಪ್ರವೇಶಿಸಿದ ಜಾನ್ ಸೆನಾ 16 ಬಾರಿ WWE ಚಾಂಪಿಯನ್ ಆಗಿ ಪ್ರಶಸ್ತಿ ಗೆದ್ದಿದ್ದಾರೆ.  ಕುಸ್ತಿ ಮತ್ತು ನಟನೆಯ ಹೊರತಾಗಿ, ಜಾನ್ ಸೀನಾ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೀನಾ ಹಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ನಟಿಸಿದ್ದಾರೆ.   

ಎರಡು ದಶಕಗಳಿಗೂ ಹೆಚ್ಚು ಕಾಲ ಕುಸ್ತಿಯಲ್ಲಿ ಹಲವು ಅನುಭವಗಳಾಗಿವೆ, ಇದೀಗ ವಿದಾಯ ಹೇಳುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ ಎಂದು ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳು ಎಂದು ಹೇಳುತ್ತಾ, ಅವರಿಂದಲೇ ನಾನು ವೃತ್ತಿಜೀವನದಲ್ಲಿ ಅತ್ಯುನ್ನತ ಎತ್ತರಕ್ಕೆ ಏರಲು ಕಾರಣ ಎಂದು ವಿವರಿಸಿದ್ದಾರೆ.   

ಜಾನ್ ಸೆನಾ ಅವರು WWE ಅನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಭಾವುಕರಾಗಿದ್ದಾರೆ. 2025 ರಲ್ಲಿ, ಜಾನ್ ಸೆನಾ ರಾಯಲ್ ರಂಬಲ್, ದಿ ಎಲಿಮಿನೇಟರ್ ಚೇಂಬರ್, ರೆಸಲ್ಮೇನಿಯಾ 41 ಅನ್ನು ಎದುರಿಸಿದ ನಂತರ ಆಟಕ್ಕೆ ಜಾನ್‌ ಸೀನಾ ಗುಡ್‌ ಬೈ ಹೇಳಲಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link