Jr NTR : ಪತ್ನಿಯ ಬರ್ತ್‌ ಡೇಗೆ ಮುದ್ದಾಗಿ ಶುಭ ಕೋರಿದ ಜೂ.ಎನ್‌ಟಿಆರ್, ಇಲ್ಲಿದೆ ಅಪರೂಪದ ಫೋಟೋಗಳು

Sun, 26 Mar 2023-11:51 am,

ಆರ್‌ಆರ್‌ಆರ್ ನಟ ಜೂನಿಯರ್ ಎನ್‌ಟಿಆರ್ ತಮ್ಮ ಮಡದಿಯ ಜನ್ಮದಿನಂದು ಅಪರೂಪದ ಫೋಟೋವನ್ನು ಹಂಚಿಕೊಂಡೊದ್ದಾರೆ. ಪ್ರೀತಿಯ ಪತ್ನಿಗೆ ಮುದ್ದಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.   

ಜೂನಿಯರ್ ಎನ್‌ಟಿಆರ್ ಅವರು ತಮ್ಮ RRR ಚಲನಚಿತ್ರಕ್ಕಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ಇದು ನಾಟು ನಾಟು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ. ಎಸ್ಎಸ್ ರಾಜಮೌಳಿ ಚಿತ್ರದಲ್ಲಿ ಎನ್‌ಟಿಆರ್ ಮತ್ತು ರಾಮ್ ಚರಣ್ ನಾಯಕರಾಗಿದ್ದರು.   

ತಾವು ಅಭಿನಯಿಸಿದ ಸಿನಿಮಾದ ಹಾಡಿಗೆ ಆಸ್ಕರ್‌ ಬಂದ ಸಂಭ್ರಮದ ಮಧ್ಯೆ, ಜೂ.ಎನ್‌ಟಿಆರ್‌ ತಮ್ಮ ಮುದ್ದಿನ ಮಡದಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪತ್ನಿ ಲಕ್ಷ್ಮಿ ಪ್ರಣತಿ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.   

ಲಕ್ಷ್ಮಿ ಪ್ರಣತಿ ಅವರನ್ನು ಜೂನಿಯರ್ ಎನ್‌ಟಿಆರ್ ಮೇ 11, 2011 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು. ಅವರ ಮದುವೆಯನ್ನು ನಟನ ಕುಟುಂಬದವರು ಅರೇಂಜ್‌ ಮಾಡಿದ್ದರು.   

ಅದೊಂದು ಅರೇಂಜ್ಡ್ ಮ್ಯಾರೇಜ್ ಸೆಟಪ್ ಆಗಿತ್ತು. ಈ ದಂಪತಿಗೆ ನಂದಮೂರಿ ಭಾರ್ಗವ ರಾಮ್ ಮತ್ತು ಅಭಯ್ ರಾಮ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link