ಈ ಫೋಟೋದಲ್ಲಿ ಇರುವ ಯುವತಿ ಇಂದು ಕೋಟ್ಯಾಂತರ ಯುವಕರ ಕನಸಿನ ರಾಣಿ..! ಸಧ್ಯ ಈಕೆಯದ್ದೇ ಹವಾ..

Sun, 22 Sep 2024-11:29 pm,

ಈಕೆಯ ಮೊದಲ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸೌಂದರ್ಯ ಮತ್ತು ನಟನೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪ್ರೇಕ್ಷಕರ ಮನಗೆದ್ದಳು. ಒಂದೆಡೆ ಸ್ಟಾರ್ ಹೀರೋ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ, ಮತ್ತೊಂದೆಡೆ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲೂ ಮಿಂಚುತ್ತಿದ್ದಾಳೆ..  

ಮೇಲಿನ ಫೋಟೋದಲ್ಲಿ ಇರುವ ಮುದ್ದಾದ ಯುವತಿ ಯಾರು ಅಂತ ನೆನಪಾಯ್ತಾ..? ಈಗ ಈಕೆ ಅತ್ಯಂತ ಟ್ರೆಂಡಿಂಗ್ ನಟಿ. ಕಳೆದ ಕೆಲವು ತಿಂಗಳುಗಳಿಂದ ಈ ಚೆಲುವೆಯ ಹೆಸರು ಬಾಲಿವುಡ್ ಜೊತೆಗೆ ದಕ್ಷಿಣದ ಇಂಡಸ್ಟ್ರಿಯಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ.   

ತಾಯಿ ಸ್ಟಾರ್ ಹೀರೋಯಿನ್, ತಂದೆ ಸ್ಟಾರ್ ಪ್ರೊಡ್ಯೂಸರ್. ಹೆಚ್ಚಾಗಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಈಕೆ, ತ್ನ ಸೌಂದರ್ಯ ಪ್ರದರ್ಶನ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾಳೆ..  

ಸಧ್ಯ ದಕ್ಷಿಣ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿರುವ ನಟಿ, ತೆಲುಗು ಚಿತ್ರವೊಂದಲ್ಲಿ ನಟಿಸಿದ್ದಾರೆ.. ಇದರಿಂದಾಗಿ ಈ ನಾಯಕಿಯ ಹೆಸರು ಈಗ ಜನಪ್ರಿಯವಾಗಿದೆ. ಹೌದು.. ಇವಾಗ ನಿಮಗೆ ಅರ್ಥವಾಗಿರಬೇಕು.. ಯಸ್‌.. ಈಕೆ ಬೇರೆ ಯಾರೂ ಅಲ್ಲ, ʼದೇವರʼ ನಾಯಕಿ ಜಾನ್ವಿ ಕಪೂರ್. ಈ ಮೇಲಿನ ಫೊಟೋ ಜಾನ್ವಿ ಚಿಕ್ಕ ವಯಸ್ಸಿನಲ್ಲಿದ್ದಾಗ ತೆಗೆದದ್ದು..   

ಜಾನ್ವಿ ಕಪೂರ್ ಈಗಾಗಲೇ ಬಾಲಿವುಡ್‌ನಲ್ಲಿ ಕ್ರೇಜಿ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಈಗ ಜ್ಯೂನಿಯರ್ ಎನ್ ಟಿಆರ್ ದೇವರ ಸಿನಿಮಾದ ಮೂಲಕ ತೆಲುಗು ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 27 ರಂದು ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.   

ಕೊರಟಾಲ ಶಿವ ನಿರ್ದೇಶನದ ಈ ಹೈ ವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿಲನ್ ಆಗಿ ನಟಿಸುತ್ತಿದ್ದಾರೆ. ಅನಿರುದ್ಧ್ ಅವರ ಹಾಡುಗಳು ಈಗಾಗಲೇ ಚಾರ್ಟ್ ಬಸ್ಟರ್ ಆಗಿವೆ.   

ದೇವರ ನಂತರ, ಜಾನ್ವಿ ರಾಮ್ ಚರಣ್ ಮತ್ತು ಬುಬ್ಬಿಬಾಬು ಕಾಂಬಿನ ಮುಂಬರುವ ಯೋಜನೆಯಲ್ಲಿ ನಟಿಸಲಿದ್ದಾರೆ. ಇದಲ್ಲದೇ ನ್ಯಾಚುರಲ್ ಸ್ಟಾರ್ ನಾನಿ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರಂತೆ.. ಸಧ್ಯ ದೇವರ ಸಿನಿಮಾ ಜಾನ್ವಿಗೆ ಅದೃಷ್ಟ ತಂದುಕೊಡುತ್ತಾ ಅಂತ ಕಾಯ್ದು ನೋಡಬೇಕಿದೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link