Sandalwood: 2300 ಕೋಟಿ ಶ್ರೀಮಂತ ಉದ್ಯಮಿ ಜೊತೆ ಕನ್ನಡದ ಸ್ಟಾರ್‌ ನಟಿ 2 ನೇ ಮದುವೆ !

Sat, 15 Jun 2024-2:05 pm,

ಬಾಲಿವುಡ್‌ನಲ್ಲಿ ಅನೇಕ ನಟಿಯರು ಕೋಟಿ ಕೋಟಿ ಆಸ್ತಿಯುಳ್ಳ ಉದ್ಯಮಿಗಳನ್ನು ಮದುವೆಯಾಗಿದ್ದಾರೆ. ಅವರಲ್ಲಿ ಒಬ್ಬರು ಜೂಹಿ ಚಾವ್ಲಾ.

ಜೂಹಿ ಚಾವ್ಲಾ ಶ್ರೀಮಂತ ಉದ್ಯಮಿ ಜಯ್ ಮೆಹ್ತಾ ಅವರನ್ನು ಮದುವೆಯಾಗಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದವರು. ಇಬ್ಬರೂ ತಮ್ಮ ಮದುವೆ ವಿಚಾರವನ್ನು ಸುಮಾರು 6 ವರ್ಷಗಳ ಕಾಲ ಮರೆಮಾಚಿದ್ದರು.

ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಸಿನಿಮಾವೊಂದರ ಸೆಟ್‌ನಲ್ಲಿ ಮೊದಲು ಭೇಟಿಯಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೇಮವಾಗಿ ದಂಪತಿಗಳಾದರು. 

ಜಯ್ ಮೆಹ್ತಾಗೆ ಆಗಲೇ ಒಂದು ಮದುವೆಯಾಗಿತ್ತು. ಆದರೆ ಅವರ ಮೊದಲ ಪತ್ನಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಜೂಹಿಯನ್ನು ಭೇಟಿಯಾದಾಗ ಜಯ್ ಮೆಹ್ತಾ ಪತ್ನಿ ಅಗಲಿಕೆಯ ನೋವಿನಲ್ಲಿದ್ದರು.

ಜಯ್ ಮೆಹ್ತಾ ಮತ್ತು ಜೂಹಿ ಚಾವ್ಲಾ 1995 ರಲ್ಲಿ ವಿವಾಹವಾದರು. ಆದರೆ ಅದನ್ನು ಯಾರಿಗೂ ತಿಳಿಯದಂತೆ ಮುಚ್ಚಿಟ್ಟರು. ಇದಕ್ಕೆ ಕಾರಣ ಅಂದು ಉತ್ತುಂಗದಲ್ಲಿದ್ದ ಜೂಹಿ ಕೆರಿಯರ್. 

ಮದುವೆ ಆಗಿದ್ದು ಗೊತ್ತಾದರೆ ಸಿನಿ ಕರಿಯರ್‌ ಹಾಳಾಗುತ್ತದೆ ಎಂಬ ಭಯಕ್ಕೆ ಜೂಹಿ ಚಾವ್ಲಾ 6 ವರ್ಷ ಈ ವಿಚಾರವನ್ನೇ ಮುಚ್ಚಿಟ್ಟರು. ಜಯ್ ಮೆಹ್ತಾ ಅವರು ಉತ್ತಮ ಸಂಗಾತಿಯಂತೆ ಸಂಪೂರ್ಣವಾಗಿ ಬೆಂಬಲಿಸಿದರು.

ಕೊನೆಗೆ ಮದುವೆಯಾಗಿ 6 ​​ವರ್ಷಗಳ ಬಳಿಕ ಜೂಹಿ ಗರ್ಭಿಣಿಯಾಗಿ ತಾಯಿಯಾಗುವ ಸಮಯದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಜಯ್ ಮೆಹ್ತಾ ‘ದಿ ಮೆಹ್ತಾ ಗ್ರೂಪ್‌’ ಸ್ಥಾಪಕರಾಗಿದ್ದಾರೆ. 

4162 ಕೋಟಿ ರೂಪಾಯಿ ಮೌಲ್ಯದ ಕಂಪನಿ ಇದಾಗಿದೆ. ವಿಶ್ವಾದ್ಯಂತ 15,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಈ ಸಂಸ್ಥೆ ಹೊಂದಿದೆ. ಜಯ್ ಮೆಹ್ತಾ 2300 ಕೋಟಿ ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಜಯ್ ಮೆಹ್ತಾ ದೊಡ್ಡ ಉದ್ಯಮಿ. ಅಮೆರಿಕ, ಆಫ್ರಿಕಾ ಮತ್ತು ಯುರೋಪ್‌ನಲ್ಲಿಯೂ ಇವರ ವ್ಯಾಪಾರ ವಿಸ್ತರಣೆಯಾಗಿದೆ. ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕರಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link