Juices For Body Detox: ಶರೀರದಿಂದ ವಿಷಕಾರಿ ಪದಾರ್ಥಗಳನ್ನು ಹೊರ ಹಾಕುವ 5 ಪ್ರಮುಖ ಪೇಯಗಳು ಇಲ್ಲಿವೆ
1. ಅರಿಶಿಣ ಚಹಾ -ನೈಸರ್ಗಿಕ ಆಂಟಿಬಾಡಿಗಳ ಬಗ್ಗೆ ಹೇಳುವುದಾದರೆ, ಅರಿಶಿನದ ಹೆಸರು ಮೊದಲಿಗೆ ಕೇಳಿಬರುತ್ತದೆ. ಅರಿಶಿನವು ಯಕೃತ್ತಿನ ಕಿಣ್ವಗಳನ್ನು ಉತ್ಪಾದಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಇದಕ್ಕಾಗಿ, ನೀರನ್ನು ಕುದಿಸಿ, ಒಂದು ಸಣ್ಣ ಚಮಚ ಅರಿಶಿನ ಸೇರಿಸಿ ಮತ್ತು 10 ನಿಮಿಷಗಳ ಕಾಲ ಅದನ್ನು ಕುದಿಸಿ. ನಂತರ ಅದಕ್ಕೆ ನಿಂಬೆರಸ ಮತ್ತು ಚಿಟಿಕೆ ಕರಿಮೆಣಸನ್ನು ಬೆರೆಸಿ ಚಹಾದಂತೆ ಕುಡಿಯಿರಿ. ದೇಹವನ್ನು ನಿರ್ವಿಷಗೊಳಿಸಲು ಇದು ತುಂಬಾ ಪರಿಣಾಮಕಾರಿ ಪಾನೀಯವಾಗಿದೆ.
2. ಕಬ್ಬಿನ ರಸ - ತಾಜಾ ಕಬ್ಬಿನ ರಸವನ್ನು ಕುಡಿಯುವುದು ರುಚಿಕರ ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅತಿ ಸಿಹಿಯಾಗಿರುವ ಕಾರಣ ಜನರು ಇದನ್ನು ದೂರಕ್ಕೆ ಇರಿಸುತ್ತಾರೆ. ಆದರೆ, ದೇಹವನ್ನು ನಿರ್ವಿಷಗೊಳಿಸಲು ಮತ್ತು ಯಕೃತ್ತನ್ನು ಆರೋಗ್ಯಕರವಾಗಿಡಲು ಇದು ತುಂಬಾ ಒಳ್ಳೆಯ ಪಾನೀಯ ಎಂಬುದು ಕೆಲವೇ ಜನರಿಗೆ ತಿಳಿದಿದೆ.
3. ಹಸಿರು ತರಕಾರಿಗಳ ಜ್ಯೂಸ್ - ಹಸಿರು ತರಕಾರಿಗಳನ್ನು ತಿನ್ನುವುದರಿಂದ ಹೆಚ್ಚು ಪ್ರಯೋಜನ ಸಿಗುತ್ತದೆ. ಅವುಗಳ ರಸವನ್ನು ಕುಡಿಯುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಲ್ಲದೆ, ಇದು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.
4. ಗ್ರೀನ್ ಟೀ - ಗ್ರೀನ್ ಟೀ ದೇಹವನ್ನು ನಿರ್ವಿಷಗೊಳಿಸಲು ಸುಲಭವಾದ ಮತ್ತು ಜನಪ್ರಿಯ ಪಾನೀಯವಾಗಿದೆ.ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಹಸಿರು ಚಹಾವನ್ನು ಕುಡಿಯುವುದರಿಂದ ದೇಹದ ಕೊಬ್ಬು ಸುಡುತ್ತದೆ ಮತ್ತು ಯಕೃತ್ತನ್ನು ಇದು ಆರೋಗ್ಯಕರವಾಗಿರಿಸುತ್ತದೆ.
5. ಬೀಟ್ ರೂಟ್ ಜ್ಯೂಸ್ - ಬೀಟ್ ಜ್ಯೂಸ್ ಕಬ್ಬಿಣ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳ ಆಗರವಾಗಿದೆ. ಇದಲ್ಲದೆ, ಇದು ಯಕೃತ್ತಿಗೆ ಪ್ರಯೋಜನವನ್ನು ಸಹ ನೀಡುತ್ತದೆ.