ಯುವಾವಸ್ಥೆಯಲ್ಲಿ ಗುರು-ಶುಕ್ರರ ನಡೆ ಆರಂಭ, 4 ರಾಶಿಗಳ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ!
ವೃಷಭ ರಾಶಿ- ಯುವಾವಸ್ಥೆಯ ಗುರು ಮತ್ತು ಶುಕ್ರರ ಭೇಟಿ ನಿಮಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಗುರು ಮತ್ತು ಶುಕ್ರರು ಶುಭ ಸ್ಥಾನಗಳಲ್ಲಿ ವಿರಾಜಮಾನರಾಗಿದ್ದಾರೆ. ಹೀಗಾಗಿ ಈ ಸಮಯದಲ್ಲಿ ನಿಮಗೆ ಎಲ್ಲಾ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಗಲಿದೆ. ವ್ಯಾಪಾರ ಅಥವಾ ಕೆಲಸ-ವ್ಯವಹಾರಗಳು ವಿದೇಶಗಳಿಗೆ ಸಂಬಂಧಿಸಿದ ಜನರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರಲಿವೆ. ಹಳೆಯ ಹೂಡಿಕೆಯಿಂದಲೂ ಲಾಭವಾಗಲಿದೆ.
ಕರ್ಕ ರಾಶಿ- ಯುವಾವಸ್ಥೆಯಲ್ಲಿ ಗುರು-ಶುಕ್ರರ ಭ್ರಮಣ ಕರ್ಕ ರಾಶಿಯವರಿಗೆ ಅಪಾರ ವಿತ್ತೀಯ ಲಾಭ ನೀಡಲಿದೆ. ಏಕೆಂದರೆ ಗುರು ಮತ್ತು ಶುಕ್ರರು ನಿಮ್ಮ ರಾಶಿಯಿಂದ ನವಮೇಶ ಭಾವದಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗಿ ನೀವು ಈ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಇದರೊಂದಿಗೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ಮತ್ತು ಮಾಲವ್ಯ ರಾಜಯೋಗಗಳೂ ಕೂಡ ರೂಪುಗೊಳ್ಳುತ್ತಿವೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಇದರೊಂದಿಗೆ ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ಸಿಗಲಿದೆ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವವರ ಸಮಸ್ಯೆ ನಿವಾರಣೆಯಾಗಲಿದೆ. ಈ ಸಮಯದಲ್ಲಿ ನೀವು ವಿದೇಶ ಪ್ರವಾಸವನ್ನೂ ಮಾಡಬಹುದು.
ಧನು ರಾಶಿ- ಯುವಾವಸ್ಥೆಯಲ್ಲಿ ಗುರು ಶುಕ್ರರ ಸಂಚಾರ ನಿಮ್ಮ ಪಾಲಿಗೂ ಕೂಡ ಸಾಕಷ್ಟು ಅನುಕೂಲಕರವಾಗಿದೆ. ಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಮಾಲವ್ಯ ಮತ್ತು ಹಂಸ ಎಂಬ ರಾಜಯೋಗಗಳು ಕೂಡ ರೂಪುಗೊಳ್ಳುತ್ತಿವೆ. ಹೀಗಾಗಿ ನೀವು ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಇದರೊಂದಿಗೆ ನೀವು ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುತ್ತೀರಿ. ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ನಿಮಗೆ ಭಾರಿ ಘನತೆ-ಗೌರವ ಪ್ರಾಪ್ತಿಯಾಗಲಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ಮೀನ ರಾಶಿ- ಯುವಾವಸ್ಥೆಯಲ್ಲಿನ ಬೃಹಸ್ಪತಿ-ಶುಕ್ರರ ನಡೆ ನಿಮ್ಮ ಪಾಲಿಗೂ ಕೂಡ ಒಳ್ಳೆಯ ಸುದ್ದಿಗಳನ್ನು ತರಲಿದೆ. ಏಕೆಂದರೆ ಗುರು ಗ್ರಹವು ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ಎಂಬ ರಾಜಯೋಗವನ್ನು ಸೃಷ್ಟಿಸಿದೆ. ಮತ್ತೊಂದೆಡೆ, ಶುಕ್ರ ಗ್ರಹವು ನಿಮ್ಮ ಸಂಕ್ರಮಣ ಜಾತಕದಲ್ಲಿ ಮಾಲವ್ಯ ರಾಜಯೋಗವನ್ನು ಸಹ ಸೃಷ್ಟಿಸಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿಯನ್ನು ಹೆಚ್ಚಾಗಲಿದೆ. ಅಲ್ಲದೆ, ಈ ಸಮಯದಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ಅವರ ಆದಾಯ ಕೂಡ ಹೆಚ್ಚಾಗಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)