ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ!

Thu, 24 Oct 2024-6:58 am,

ಜ್ಯೋತಿಷ್ಯದಲ್ಲಿ ದೇವಗುರು ಸ್ಥಾನಮಾನ ಪಡೆದಿರುವ ಬೃಹಸ್ಪತಿ (ಗುರು) ಪ್ರಸ್ತುತ ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 2025ರ ಫೆಬ್ರವರಿ 05ರವರೆಗೂ ಗುರು ಇದೇ ಸ್ಥಿತಿಯಲ್ಲಿ ಇರುತ್ತಾನೆ. 

ವೃಷಭ ರಾಶಿಯಲ್ಲಿ ಗುರುವಿನ ಹಿಮ್ಮುಖ ಸಂಚಾರದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗುರು ಮಹಾ ದೆಸೆಯನ್ನು ನೀಡಲಿದೆ. ಈ ಸಮಯದಲ್ಲಿ ಅವರ ಸಂಕಷ್ಟಗಳೆಲ್ಲಾ ದೂರವಾಗಿ, ಸುಖ-ಸೌಕರ್ಯಗಳು ಹೆಚ್ಚಾಗಲಿವೆ. 

ಗುರು ಬಲದಿಂದ ಈ ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಹೊಸ ಮನೆ, ವಾಹನ ಖರೀದಿಸುವ ಯೋಗವೂ ಇದೆ.

ಜೀವನದಲ್ಲಿ ಹಲವು ಆಯಾಮಗಳಲ್ಲಿ ಎದುರಾಗಿದ್ದ ಸಂಕಷ್ಟಗಳು ಸರಿದು ಸಂತೋಷದ ಸಮಯ ಹರಿದುಬರುವ ಪರ್ವಕಾಲ. ವೃತ್ತಿ ಬದುಕಿನಲ್ಲಿ ಮೇಲುದ್ದೆಗೆ ಏರುವ ಅವಕಾಶ. ಆದಾಯ ಹೆಚ್ಚಳ, ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ. 

ಗುರು ಬಲದಿಂದ ವೃತ್ತಿಯಲ್ಲಿ ಏಳ್ಗೆ, ಆದಾಯದಲ್ಲಿ ಏರಿಕೆ ಸಾಧ್ಯತೆ. ಆರೋಗ್ಯ ವೃದ್ದಿ, ನಿಂತುಹೋಗಿದ್ದ ಮದುವೆ ಮಾತುಕತೆಗಳು ಮುಂದುವರೆಯುವ ಸುಸಮಯ. ಕೌಟುಂಬಿಕ ಸುಖ-ಸಂತೋಷ ಹೆಚ್ಚಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link