Jupiter Rise 2023: ಈ 4 ರಾಶಿಗಳ ಅದೃಷ್ಟ ಬೆಳಗಿಸುವನು ಗುರು, ಇನ್ನು 3 ದಿನ ಕಾಯಿರಿ!

Mon, 24 Apr 2023-5:32 pm,

ಮೇಷ ರಾಶಿ : ಏಪ್ರಿಲ್ 27 ರಂದು ಗುರುವು ಮೇಷ ರಾಶಿಯಲ್ಲಿ ಉದಯಿಸುತ್ತಾನೆ. ಇದು ಮೇಷ ರಾಶಿಯರಿಗೆ ಶುಭಫಲ ನೀಡಲಿದೆ. ವಿದೇಶ ಪ್ರವಾಸ ಮಾಡಬಹುದು. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ನಿಮ್ಮದಾಗುತ್ತೆ. ಉದ್ಯೋಗದಲ್ಲಿ ಬಡ್ತಿ, ಸಂಬಳ ಏರಿಕೆಯ ಸಾಧ್ಯತೆ ಇದೆ. ಉದ್ಯಮಿಗಳಿಗೂ ಉತ್ತಮ ಕಾಲ.ಪ್ರತಿ ಕೆಲಸದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತೀರಿ.  

ಸಿಂಹ ರಾಶಿ : ಗುರುವಿನ ಉದಯದಿಂದ ಸಿಂಹ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ, ಜೊತೆಗೆ ಪಾಲುದಾರಿಕೆಯಲ್ಲಿ ಹೊಸ ಕೆಲಸ ಪ್ರಾರಂಭವಾಗಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಸಂಬಳದಲ್ಲಿ ಹೆಚ್ಚಳವಾಗಲಿದೆ. ವರ್ಗಾವಣೆ, ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ತಂದೆಯ ಸಹಕಾರವೂ ಸಿಗಲಿದೆ. ಹೂಡಿಕೆಗೆ ಅನುಕೂಲಕರ ಸಮಯ.   

ಧನು ರಾಶಿ: ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಅಧ್ಯಯನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉತ್ತಮ ಅಂಕಗಳನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಮತ್ತು ಉದ್ಯೋಗದಲ್ಲಿ ಲಾಭದ ಸಾಧ್ಯತೆ ಇದೆ. ಹೂಡಿಕೆ, ಪ್ರಯಾಣ, ಯಾವುದೇ ಪ್ರಮುಖ ಕೆಲಸಕ್ಕೆ ಅನುಕೂಲಕರ  ಸಮಯ.  

ಕರ್ಕಾಟಕ ರಾಶಿ: ಈ ರಾಶಿಯವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ವ್ಯಾಪಾರ ವೃದ್ಧಿಯಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಇದರಿಂದಾಗಿ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.  

ಮೀನ ರಾಶಿ: ಮೇಷ ರಾಶಿಯಲ್ಲಿ ಗುರುಗ್ರಹದ ಉದಯದಿಂದ ಮೀನ ರಾಶಿಯವರ ವ್ಯಾಪಾರ ಮತ್ತು ವೃತ್ತಿ ಎರಡರಲ್ಲೂ ಯಶಸ್ಸು ಇರುತ್ತದೆ. ಹೊಸ ಮೂಲದಿಂದ ಲಾಭದ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link