ಗುರು ಉದಯದಿಂದ ಕುಬೇರ ಯೋಗ : ಈ ರಾಶಿಗಳಿಗೆ ಹಣದ ಸುರಿಮಳೆ, ವೃತ್ತಿಯಲ್ಲಿ ಪ್ರಗತಿ.. ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಹಿಂಬಾಲಿಸುವುದು ಅದೃಷ್ಟ !
Guru Uday Effects : ಗುರು ಉದಯದ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಬೀರುತ್ತದೆ. ಕೆಲವು ರಾಶಿಗಳಿಗೆ ಅತಿಯಾದ ಪ್ರಯೋಜನ ದೊರೆಯುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.
ವೃಷಭ ರಾಶಿ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಕೆಲಸ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ. ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಶುಭ ಕಾರ್ಯಗಳಿಗೆ ಅನುಕೂಲಕರವಾಗಿದೆ. ಸಾಲದ ಹೊರೆಯಿಂದ ಮುಕ್ತಿ ಸಿಗುತ್ತದೆ.
ಸಿಂಹ ರಾಶಿ: ಆಧ್ಯಾತ್ಮಿಕ ಕೆಲಸದಲ್ಲಿ ಹೆಚ್ಚು ಆಸಕ್ತಿ ವಹಿಸುವರು. ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ಬಡ್ತಿ ಮತ್ತು ಆರ್ಥಿಕ ಲಾಭ. ವ್ಯಾಪಾರಿಗಳಿಗೆ ಲಾಭವಾಗಲಿದೆ. ಧೈರ್ಯ ಜೊತೆಗಿರುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ.
ಮಿಥುನ ರಾಶಿ: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತಾರೆ. ಮನೆ ಮತ್ತು ಕಾರು ಖರೀದಿಸುವ ಯೋಗವಿದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಲಿದೆ.
ಕರ್ಕ ರಾಶಿ: ಬಹಳ ದಿನಗಳಿಂದ ಸಿಲುಕಿಕೊಂಡಿದ್ದ ಹಣ ಈಗ ವಾಪಸ್ ಬರಲಿದೆ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ.
ಮೇಷ ರಾಶಿ: ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭ ಇರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕಠಿಣ ಪರಿಶ್ರಮದಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.
ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಹೆಚ್ಚಿನ ಸಂಗತಿ ತಿಳಿಯಲು ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದಕ್ಕೆ ಯಾವುದೇ ರೀತಿಯಲ್ಲೂ ಹೊಣೆಗಾರನಲ್ಲ.