ವರ್ಷಾರಂಭದಲ್ಲಿಯೇ ಗುರು-ಶುಕ್ರರ ಮೈತ್ರಿ, ಈ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭ, ಪದೋನ್ನತಿ ಭಾಗ್ಯ!
ಜೋತಿಷ್ಯ ಪಂಚಾಂಗದ ಪ್ರಕಾರ ಏಪ್ರಿಲ್ 13, 2024 ರಂದು ರಾತ್ರಿ 9 ಗಂಟೆ 15 ನಿಮಿಷಕ್ಕೆ ಗ್ರಹಗಳ ರಾಜ ಸೂರ್ಯ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲಿ ಈಗಾಗಲೇ ಗುರು ವಿರಾಜಮಾನನಾಗಿರಲಿದ್ದಾನೆ. ಹೀಗಿರುವಾಗ ಮೇ 1, 2024ರವರೆಗೆ ಮೇಷ ರಾಶಿಯಲ್ಲಿ ಗುರು-ಸೂರ್ಯರ ಮೈತ್ರಿ ನೆರವೇರಲಿದೆ. ಬಳಿಕ ಗುರು ವೃಷಭ ರಾಶಿಗೆ ಸಾಗಲಿದ್ದಾನೆ. ಮೇಷ ಸೂರ್ಯನ ಉನ್ನತ ರಾಶಿಯಾಗಿದೆ, ಹಾಗೂ ಮೇಷ ರಾಶಿಯ ಅಧಿಪತಿ ಮಂಗಳನ ಜೊತೆಗೆ ಗುರುವಿನ ಸ್ನೇಹಭಾವದ ಸಂಬಂಧವಿದೆ.
ಮೇಷ ರಾಶಿ: ಸೂರ್ಯ-ಗುರುವಿನ ಮೈತ್ರಿ ನಿಮ್ಮ ರಾಶಿಯ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಿರುವಾಗ ಹೊಸ ವರ್ಷದಲ್ಲಿ ಮೇಷ ರಾಶಿಯವರಿಗೆ ಅಪಾರ ಲಾಭ ಸಿಗಲಿದೆ. ದೀರ್ಘ ಕಾಲದ ಕಷ್ಟ ಜೀವನ ಅಂತ್ಯವಾಗಲಿದೆ. ಸರ್ಕಾರಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಅಪಾರ ಲಾಭ ಸಿಗಲಿದೆ. ಸೂರ್ಯನನ್ನು ವೃತ್ತಿ ಜೀವನ ಹಾಗೂ ವ್ಯವಸಾಯಕ್ಕೆ ಅಧಿಪತಿ ಎನ್ನಲಾಗುತ್ತದೆ. ಹೀಗಾಗಿ ಗುರು ಸೂರ್ಯನ ಮೈತ್ರಿ ಕಾರ್ಯ ಕ್ಷೇತ್ರದಲ್ಲಿ ಅಪಾರ ಹೆಚ್ಚಳವನ್ನು ಸೂಚಿಸುತ್ತದೆ. ಇದರಿಂದ ನಿಮಗೆ ಪದೋನ್ನತಿ ಭಾಗ್ಯ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗಲಿದ್ದಾರೆ. ಇದರ ಜೊತೆಗೆ ಅವರು ನಿಮಗೆ ಮಹತ್ವದ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಸಾಲಬಾಧೆಯಿಂದ ನಿಮಗೆ ಮುಕ್ತಿ ಸಿಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ, ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ.
ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಗುರು-ಸೂರ್ಯರ ಈ ಮೈತ್ರಿ ರೂಪುಗೊಳ್ಳುತ್ತಿದೆ. ವೈದಿಕ ಜೋತಿಷ್ಯದಲ್ಲಿ ಈ ಭಾವವನ್ನು ಆದಾಯ, ಆರ್ಥಿಕ ಲಾಭ, ಧನ -ಪ್ರಸಿದ್ಧಿಯ ಭಾವ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ರಾಶಿಯ ಜಾತಕದವರಿಗೆ ಆರ್ಥಿಕ ಲಾಭ ಸಿಗಲಿದೆ. ಆರ್ಥಿಕ ವಿಷಯಗಳಲ್ಲಿ ಉತ್ತಮ ಫಲಗಳು ಪ್ರಾಪ್ತಿಯಾಗಲಿವೆ. ಹಣ ಉಳಿತಾಯ ಮಾಡುವಲ್ಲಿಯೂ ಕೂಡ ಯಶಸ್ಸು ಸಿಗಲಿದೆ. ಆದಾಯದ ಹೊಸ ಮೂಲಗಳು ಕೂಡ ತೆರೆದುಕೊಳ್ಳಲಿವೆ. ವರ್ತಮಾನದಲ್ಲಿ ನೌಕರಿಯಲ್ಲಿ ಪದೋನ್ನತಿ ಹಾಗೂ ವೇತನ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಸಹೋದರ-ಸಹೋದರಿಯರ ಜೊತೆಗೆ ಉತ್ತಮ ಕಾಲ ಕಳೆಯಲಿದೆ. ಖರ್ಚು ಹೆಚ್ಚಾಗುವ ಸಾಧ್ಯತೆಯೂ ಇದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಕೀರ್ತಿ ಹೆಚ್ಚಾಗಲಿದೆ.
ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಸೂರ್ಯ-ಗುರುವಿನ ಈ ಯುತಿ ನೆರವೇರುತ್ತಿದೆ. ಜೋತಿಷ್ಯ ಶಾಸ್ತ್ರದಲ್ಲಿ ಈ ಜಾಗವನ್ನು ಕರ್ಮ ಭಾವ ಎಂದು ಕರೆಯಲಾಗುತ್ತದೆ. ಹೀಗಾಗಿ ಹೊಸವರ್ಷದಲ್ಲಿ ಸ್ಥಾನ ಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ಜೀವನದಲ್ಲಿ ಖುಷಿಗಳೆ ಖುಷಿಗಳು ಆಗಮಿಸಲಿವೆ. ವೃತ್ತಿಪರ ಜೀಯನದಲ್ಲಿ ಭಾರಿ ಲಾಘ ನಿಮ್ಮದಾಗಲಿದೆ. ಕಾರ್ಯಸ್ಥಳದಲ್ಲಿ ಲಾಭದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ, ಕುಟುಂಬದಲ್ಲಿ ಖುಷಿಗಳ ಆಗಮನವಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)