ಗುರು ದೆಸೆ.. ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ.. ಸಕಲೈಶ್ವರ್ಯ ಪ್ರಾಪ್ತಿ, ದುಡ್ಡಿನ ಮಹಾಮಳೆ ಲಕ್‌ ಜೊತೆ ಲೈಫೂ ಚೇಂಜ್‌!

Sat, 21 Sep 2024-6:47 am,

ಗುರುವು ಒಂದು ರಾಶಿಯಲ್ಲಿ ಸುಮಾರು 1 ವರ್ಷ ಇರುತ್ತಾನೆ. ರಾಶಿಯ ಹೊರತಾಗಿ ಗುರು ಕಾಲಕಾಲಕ್ಕೆ ನಕ್ಷತ್ರಗಳನ್ನು ಬದಲಾಯಿಸುತ್ತಾನೆ. ಇದನ್ನು ಸಹ ಗುರುವಿನ ಸ್ಥಾನ ಬದಲಾವಣೆ ಎನ್ನಲಾಗುತ್ತದೆ. 

ಈ ಸಮಯದಲ್ಲಿ ಗುರು ಮೃಗಶಿರಾ ನಕ್ಷತ್ರದಲ್ಲಿ ಸ್ಥಿತನಿದ್ದಾನೆ. ಸೆಪ್ಟೆಂಬರ್ 22 ರಂದು ಮೃಗಶಿರ ನಕ್ಷತ್ರದ ದ್ವಿತೀಯ ಪಾದಕ್ಕೆ ಗುರು ಚಲಿಸುವುದರಿಂದ ಈ ರಾಶಿಯವರಿಗೆ ಅಗಾಧ ಲಾಭಗಳು ಸಿಗುತ್ತವೆ.

ಗುರುವನ್ನು ಸಂತೋಷ, ಸಮೃದ್ಧಿ, ಅದೃಷ್ಟಕ್ಕೆ ಕಾರಣವೆಂದು ಪರಿಗಣಿಸಲಾಗಿದೆ. ಗುರುಗ್ರಹವು ಸೆಪ್ಟೆಂಬರ್ 22 ರಂದು ಸಂಜೆ 7:14 ಕ್ಕೆ ಮೃಗಶಿರಾ ನಕ್ಷತ್ರದ ಎರಡನೇ ಪಾದವನ್ನು ಪ್ರವೇಶಿಸುವನು. ಅಕ್ಟೋಬರ್ 26 ರವರೆಗೆ ಈ ಸ್ಥಾನದಲ್ಲಿರುವನು.  

ವೃಶ್ಚಿಕ ರಾಶಿಯ ಜನರಿಗೆ ಶ್ರಮಕ್ಕೆ ತಕ್ಕ ಫಲ ಖಂಡಿತಾ ಸಿಗುತ್ತದೆ. ಕೆಲವು ದೊಡ್ಡ ಜವಾಬ್ದಾರಿಯನ್ನು ನಿಯೋಜಿಸಬಹುದು. ವೇತನ ಹೆಚ್ಚಳದ ಸಾಧ್ಯತೆಗಳೂ ಇವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. 

ಧನು ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆದಾಯದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಹಣದ ಒಳಹರಿವು ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಮನೆ ಖರೀದಿಗೆ ಅವಕಾಶವಿದೆ. 

ಮೀನ ರಾಶಿಯ ಜನರು ಇದ್ದಕ್ಕಿದ್ದಂತೆ ಹಣ ಗಳಿಸಬಹುದು. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.ನಿಮ್ಮ ಶ್ರಮವು ಫಲ ನೀಡುತ್ತದೆ. ಗೌರವ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರದ ಲಾಭಾಂಶದಲ್ಲಿ ಹೆಚ್ಚಳವಾಗಲಿದೆ. 

ಸಿಂಹ ರಾಶಿಯವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲಸದಲ್ಲಿ ಬಡ್ತಿ ಪಡೆಯಬಹುದು. ಖಾಸಗಿ ವಲಯದ ಉದ್ಯೋಗಿಗಳ ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಸಂಪತ್ತು ವೃದ್ಧಿಯಾಗಲಿದೆ. 

ಮೇಷ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. 

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ, ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link