Guru Gochar 2024: 12 ವರ್ಷಗಳ ಬಳಿಕ ವೃಷಭ ರಾಶಿಗೆ ಗುರು ಪ್ರವೇಶ, ನಾಲ್ಕು ರಾಶಿಯವರಿಗೆ ಅದೃಷ್ಟ
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಕಮಾಂಡರ್ ಗ್ರಹ, ದೇವ-ದೇವತೆಗಳ ಗುರು ಎಂದು ಪರಿಗಣಿಸಲಾಗಿದೆ. ಮಾತ್ರವಲ್ಲ, ಬೃಹಸ್ಪತಿಯನ್ನು ಅದೃಷ್ಟ, ಸಂಪತ್ತು, ಮದುವೆಕಾರಕ ಮಂಗಳ ಗ್ರಹ ಎಂದು ಹೇಳಲಾಗುತ್ತದೆ. ಗುರು ಗ್ರಹವು ವರ್ಷಕ್ಕೊಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಇದೀಗ ಶೀಘ್ರದಲ್ಲೇ ಗುರು 12 ವರ್ಷಗಳ ಬಳಿಕ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ.
2024ರ ಮೇ 01ರಂದು ಗುರು ಬರೋಬ್ಬರಿ 12 ವರ್ಷಗಳ ನಂತರ ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದನ್ನು ಮಹಾ ಗೋಚಾರ ಎಂದು ಬಣ್ಣಿಸಲಾಗುತ್ತಿದೆ. ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೂ ಕಂಡುಬರುತ್ತದೆ. ಆದರೂ, ಈ ಸಮಯವನ್ನು ನಾಲ್ಕು ರಾಶಿಯವರಿಗೆ ಭ್ಯಾಗೊದಯದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಲಿರುವ ಗುರುವು ಈ ಜನರಿಗೆ ತುಂಬಾ ಪ್ರಯೋಜನವನ್ನು ನೀಡಲಿದ್ದಾರೆ. ಈ ವೇಳೆ ಉದ್ಯೋಗ ವ್ಯವಹಾರದಲ್ಲಿ ಭಾರೀ ಯಶಸ್ಸಿನ ಜೊತೆಗೆ ಬಂಪರ್ ಲಾಭವನ್ನು ಪಡೆಯುವಿರಿ. ಒಟ್ಟಾರೆಯಾಗಿ ಇದು ಒಳ್ಳೆಯ ಸಮಯ.
ಸ್ವ ರಾಶಿಯಲ್ಲಿ ಬೃಹಸ್ಪತಿ ಪ್ರವೇಶವು ವೃಷಭ ರಾಶಿಯ ಜನರ ಜೀವನದಲ್ಲಿ ಧನಾತ್ಮಕ ಫಲಗಳನ್ನು ನೀಡಲಿದೆ. ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುವಿರಿ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಬಂಪರ್ ಲಾಭವನ್ನು ಗಳಿಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಗುರು ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯ ಜನರ ಬದುಕಿನಲ್ಲಿ ಭಾಗ್ಯದ ಜ್ಯೋತಿಯನ್ನು ಬೆಳಗಲಿದೆ. ಇದುವರೆಗೂ ನಿಮ್ಮ ಜೀವನದಲ್ಲಿ ಎದುರಾಗಿದ್ದ ಅಡೆತಡೆಗಳು ದೂರವಾಗಿ ಭೌತಿಕ ಸುಖ ವೃದ್ಧಿಯಾಗಲಿದೆ. ಹಣಕಾಸಿನ ಸ್ಥಿತಿ ಸುಧಾರಿಸುವುದರಿಂದ ಆತ್ಮವಿಶ್ವಾಸವೂ ಹೆಚ್ಚಾಗಲಿದೆ. ಇನ್ನೂ ಮದುವೆಯಾಗದವರಿಗೆ ವೈವಾಹಿಕ ಸಂತೋಷ ಪ್ರಾಪ್ತಿಯಾಗಲಿದೆ.
ಗುರು ಸಂಚಾರ ಬದಲಾವನೆಯು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ಬದಲಾಯಿಸಲಿದೆ. ವಿದೇಶ ಪ್ರವಾಸ ಸಾಧ್ಯತೆ, ಇಷ್ಟಾರ್ಥ ಸಿದ್ಧಿ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಆದಾಯ ಹೆಚ್ಚಳದಿಂದ ಏಳ್ಗೆಯನ್ನು ಕಾಣುವಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.