12 ವರ್ಷ ನಂತರ ವೃಷಭದಲ್ಲಿ ಗುರು ಗೋಚಾರ.. ಈ 3 ರಾಶಿಯವರಿಗೆ ಅದೃಷ್ಟ, ಹಣದ ಮಳೆ, ವೃತ್ತಿಯಲ್ಲಿ ಉನ್ನತಿ.. ಸಂಪತ್ತು ಹೆಚ್ಚಾಗಿ ಸಮಾಜದಲ್ಲಿ ಖ್ಯಾತಿ ಪಡೆಯುವಿರಿ!
Jupiter in Taurus Effects: ಏಪ್ರಿಲ್ ಅಂತ್ಯದಲ್ಲಿ ಗುರು ರಾಶಿಯನ್ನು ಬದಲಾಯಿಸಿದ್ದಾನೆ. ಇದುವರೆಗೆ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದ ಗುರು ಏಪ್ರಿಲ್ 29ರಂದು ವೃಷಭ ರಾಶಿಗೆ ಪ್ರವೇಶಿಸಿದ್ದಾನೆ. ವೃಷಭದಲ್ಲಿ ಗುರು ಪ್ರವೇಶದಿಂದ ಈ ರಾಶಿಗಳ ಸಂಪತ್ತು ಹೆಚ್ಚಾಗಲಿದೆ.
ವೃಷಭ ರಾಶಿ: ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಕೈ ಹಿಡಿಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆ. ಅವಿವಾಹಿತರಿಗೆ ವಿವಾಹವಾಗಲಿದೆ.
ವೃಶ್ಚಿಕ ರಾಶಿ: ಬಡ್ತಿ ದೊರೆಯಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುವ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆ. ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗಲಿದೆ. ಇದುವರೆಗೆ ನಷ್ಟದಲ್ಲಿ ಸಾಗುತ್ತಿದ್ದ ವ್ಯಾಪಾರ ಲಾಭದ ಹಾದಿ ಹಿಡಿಯಲಿದೆ. ಸಾಲ ಪಡೆದ ಹಣ ವಾಪಸ್ ಬರಲಿದೆ.
ಮಕರ ರಾಶಿ : ಮನೆಯಲ್ಲಿ ಸಂತೋಷ ತುಂಬಿರುತ್ತದೆ. ನಿಮ್ಮ ವ್ಯಾಪಾರವು ಅಭಿವೃದ್ಧಿ ಹೊಂದುತ್ತದೆ. ಮಕ್ಕಳಿಲ್ಲದ ದಂಪತಿಗೆ ಮಗುವಾಗುತ್ತದೆ. ಆರ್ಥಿಕವಾಗಿ ಏಳಿಗೆ ಹೊಂದುವಿರಿ. ನೀವು ಸಾಲದಿಂದ ಹೊರಬರುತ್ತೀರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನ ಆಧರಿಸಿದೆ. ZEE NEWS ಇದನ್ನು ಪರಿಶೀಲಿಸಿಲ್ಲ.