ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!
ನೀವು ಬಳಸುವ ಸಾಮಾನ್ಯವಾದ ಶಾಂಪೂವಿನಿಂದಲೂ ಸಹ ಉದ್ದವಾದ, ದಪ್ಪ ಕೂದಲನ್ನು ಹೊಂದಬಹುದು.
ನಿಮ್ಮ ಮನೆಯಲ್ಲಿರುವ ಕೇವಲ ಮೂರು ಪದಾರ್ಥಗಳನ್ನು ಬಳಸಿ ಸುಂದರವಾಗಿ, ದಟ್ಟವಾಗಿ, ಕಪ್ಪಾಗಿ, ಉದ್ದವಾಗಿಸಬಹುದು. ಅಷ್ಟೇ ಅಲ್ಲ, ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
ನೀವು ಬಳಸುವ ಸಾಮಾನ್ಯ ಶಾಂಪೂವಿನೊಂದಿಗೆ ಕಾಫಿ ಪುಡಿ, ದಾಲ್ಚಿನ್ನಿ, ಜೇನು ಬಳಸಿ ಸೊಂಪಾದ ಉದ್ದ ಕೂದಲನ್ನು ಹೊಂದಬಹುದು. ಆದರೆ, ಇದನ್ನು ಹೇಗೆ ಬಳಸಬೇಕು ಎಂಬುದನ್ನೂ ತಿಳಿದಿರುವುದು ಅಗತ್ಯ.
ಕಾಫಿಪುಡಿ- ಶಾಂಪೂವಿನಲ್ಲಿ ಕಾಫಿಪುಡಿ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲು ಕಪ್ಪಾಗುತ್ತದೆ.
ಕೂದಲಿಗೆ ಶಾಂಪೂವಿನೊಂದಿಗೆ ದಾಲ್ಚಿನ್ನಿ ಪುಡಿ ಬೆರೆಸಿ ಬಳಸುವುದರಿಂದ ಬಳಸುವುದರಿಂದ ಇದು ನೈಸರ್ಗಿಕವಾಗಿ ಕೂದಲಿಗೆ ಆ್ಯಂಟಿ ಆಕ್ಸಿಡೆಂಟ್ ಗಳನ್ನು ಒದಗಿಸಿ ಕೂದಲ ಬೆಳವಣಿಗೆಗೆ ಸಹಕಾರಿ ಆಗಲಿದೆ.
ಜೇನುತುಪ್ಪವು ಕೂದಲಿನ ಕಿರುಚೀಲಗಳನ್ನು ತೇವಗೊಳಿಸಲು, ಕೂದಲನ್ನು ನೈಸರ್ಗಿಕವಾಗಿ ಮೃದುಗೊಳಿಸಲು ಸಹಾಯಕವಾಗಲಿದೆ.
ಮೊದಲಿಗೆ ಒಂದು ಬತ್ತಲಿನಲ್ಲಿ ನಿಮಗೆ ಬೇಕಾದಷ್ಟು ಶಾಂಪು ಹಾಕಿ. ಇದರಲ್ಲಿ ಎರಡು ಟೀ ಚಮಚ ಕಾಫಿ ಪುಡಿ, ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೆತ್ತಿಯಿಂದ ಕೂದಲಿನ ತುದಿಯವರೆಗೂ ಇದನ್ನು ಚೆನ್ನಾಗಿ ಅನ್ವಯಿಸಿ ಸ್ನಾನ ಮಾಡಿ.
ಕೇವಲ ಒಂದು ತಿಂಗಳವರೆಗೆ ವಾರಕ್ಕೆ ಎರಡು ಬಾರಿ ಈ ರೀತಿ ಆರೈಕೆ ಮಾಡುವುದರಿಂದ ಸೊಂಪಾದ, ಉದ್ದವಾದ ಕಪ್ಪು ಕೂದಲನ್ನು ನಿಮ್ಮದಾಗಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.