ಜಸ್ಟ್ ಈ `ಸ್ಪ್ರೆ` ಹಾಕಿ ಮಸಾಜ್ ಮಾಡಿದ್ರೆ ಹೇರ್ ಫಾಲ್ ಕಡಿಮೆಯಾಗಿ, ಬೆಳ್ಳಗಾಗಿರೋ ಕೂದಲೂ ಕಪ್ಪಾಗುತ್ತೆ...
ಒತ್ತಡಭರಿತ ಜೀವನಶೈಲಿಯಲ್ಲಿ ಬಿಳಿ ಕೂದಲು, ಕೂದಲು ಉದುರುವಿಕೆ ಸಮಸ್ಯೆಗಳು ತುಂಬಾ ಸಾಮಾನ್ಯ.
ಒಂದು ಸರಳ ಮನೆಮದ್ದಿನ ಸಹಾಯದಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯುವುದರ ಜೊತೆಗೆ ಬಿಳಿ ಕೂದಲು ಸಹ ಕಪ್ಪಾಗುತ್ತದೆ.
ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಒಂದು ಸರಳ ಹೇರ್ ಸ್ಪ್ರೇ ಸಹಾಯದಿಂದ ಕೂದಲು ಉದುರುವಿಕೆಗೆ ಬ್ರೇಕ್ ಹಾಕಿ, ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಹೇರ್ ಸ್ಪ್ರೇ ತಯಾರಿಸಲು ಬೇಕಾಗುವ ಪದಾರ್ಥಗಳು:- * 1 ಸ್ಪೂನ್ ಕಪ್ಪೆಳ್ಳು * 8-10 ತಾಜಾ ಕರಿಬೇವಿನ ಎಲೆಗಳು * ನಾಲ್ಕೈದು ಕರಿಮೆಣಸು * 1 ಸ್ಪೂನ್ ಕಾಫಿ ಪುಡಿ * 1 ಕಪ್ ನೀರು
ಒಂದು ಬಟ್ಟಲಿನಲ್ಲಿ ಕಪ್ಪೆಳ್ಳು, ತಾಜಾ ಕರಿಬೇವಿನ ಎಲೆಗಳು, ಕರಿಮೆಣಸು, ಕಾಫಿ ಪುಡಿ, ನೀರು ಎಲ್ಲವನ್ನೂ ಹಾಕಿ ಒಂದು ಮುಚ್ಚುಳ ಮುಚ್ಚಿ ರಾತ್ರಿಯಿಡೀ ನೆನೆಯಲು ಬಿಡಿ.
ಮರುದಿನ ಬೆಳಿಗ್ಗೆ ನೀರನ್ನು ಶೋಧಿಸಿಕೊಂಡು ಒಂದು ಚಿಕ್ಕ ಬಾಟಲಿನಲ್ಲಿ ಹಾಕಿ ಅದಕ್ಕೆ ಸ್ಪ್ರೇ ಮಾಡಬಹುದಾದ ಮುಚ್ಚಳ ಹಾಕಿ.
ಈ ರೀತಿ ಮನೆಯಲ್ಲೇ ತಯಾರಿಸಿದ ಹೇರ್ ಸ್ಪ್ರೇ ಅನ್ನು ಕೂದಲಿನ ಬುಡಕ್ಕೆ ಸಿಂಪಡಿಸಿ 2 ನಿಮಿಷ ಲಘುವಾಗಿ ಮಸಾಜ್ ಮಾಡಿ. ಒಂದೆರಡು ಗಂಟೆ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಈ ಹೇರ್ ಸ್ಪ್ರೇ ಅನ್ನು ವಾರಕ್ಕೆರಡು ಬಾರಿ ಸತತ ಒಂದು ತಿಂಗಳು ಬಳಸುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಜೊತೆಗೆ ಕೂದಲುದುರುವ ಸಮಸ್ಯೆ ಕಡಿಮೆಯಾಗಿ ಕೂದಲು ಉದ್ದವಾಗಿಯೂ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.