ಈ ಯೋಗಾಸನ ಮಾಡಿ ಸಾಕು... ಕಿಡ್ನಿ ಸ್ಟೋನ್ ಕರಗಿ ದೇಹದಿಂದ ಗೊತ್ತಾಗದಂತೆ ಹೊರಹೋಗುವುದು!
ಕಿಡ್ನಿ ಸ್ಟೋನ್ ಗಂಭೀರ ಸಮಸ್ಯೆಯಾಗಿದೆ. ಮೂತ್ರಪಿಂಡದಲ್ಲಿ ಶೇಖರಣೆಯಾಗುವ ಘನವಸ್ತುಗಳು ಕಲ್ಲುಗಳನ್ನು ರೂಪಿಸಬಹುದು. ಕಿಡ್ನಿ ಸ್ಟೋನ್ ಇರುವವರಲ್ಲಿ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಇರುತ್ತದೆ.
ವಿಪರೀತ ಕರಣಿ: ಈ ಆಸನವು ರಕ್ತ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಕಲ್ಲುಗಳಿಂದ ಉಂಟಾಗುವ ತೊಂದರೆಗಳು ನಿವಾರಣೆಯಾಗುತ್ತವೆ.
ಪವನಮುಕ್ತಾಸನ: ಈ ಆಸನವು ಹೊಟ್ಟೆಯನ್ನು ಮಸಾಜ್ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಈ ಆಸನ ಮಾಡುವುದು ಉತ್ತಮ. ಇದು ಕಿಡ್ನಿ ಸ್ಟೋನ್ ಅಪಾಯವನ್ನು ಕಡಿಮೆಯಾಗಿಸುತ್ತದೆ.
ಭುಜಂಗಾಸನ: ಈ ಆಸನವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮೂತ್ರ ವಿಸರ್ಜನೆಯನ್ನು ಸುಗಮಗೊಳಿಸುತ್ತದೆ. ಕಲ್ಲುಗಳಿದ್ದರೆ ಅವು ಹೊರಬರುತ್ತವೆ.
ಉಸ್ಟ್ರಾಸನ: ಈ ಆಸನವು ಬೆನ್ನು ಮೂಳೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಮೂತ್ರ ವಿಸರ್ಜನೆಯನ್ನು ಸುಧಾರಿಸುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಅವು ಹೊರಬರುತ್ತವೆ.
ಧನುರಾಸನ : ಈ ಆಸನವು ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸುತ್ತದೆ. ಇದು ಮೂತ್ರದ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಕಲ್ಲುಗಳನ್ನು ತೆಗೆದುಹಾಕುತ್ತದೆ.
ಸೂಚನೆ: ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಯೋಗ ತಜ್ಞರ ಸಹಾಯದಿಂದ ಈ ಯೋಗಾಸನಗಳನ್ನು ಮಾಡುವುದು ಉತ್ತಮ. ಇಲ್ಲದಿದ್ದರೆ ಎಲ್ಲಿಯಾದರೂ ಯಾವುದೇ ಸ್ನಾಯುಗಳಲ್ಲಿ ಹಿಡಿತ ಕಾಣಿಸಿಕೊಳ್ಳುವ ಅಪಾಯವಿದೆ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.