ಕೇವಲ 113 ರೂ.ಗೆ 10 ಗ್ರಾಂ ಚಿನ್ನ..! ಅತ್ಯಲ್ಪ ಬೆಲೆಗೆ ಬಂಗಾರ ಸಿಕ್ಕಿದ್ದು ಹೇಗೆ ಗೊತ್ತಾ? ಡೌಟ್ ಇದ್ರೆ ಬಿಲ್ ಫೋಟೋ ನೋಡಿ
1959 ರ ಚಿನ್ನದ ರಶೀದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿನ್ನದ ಬೆಲೆ ನೋಡಿ ಜನರು ಆಶ್ಚರ್ಯ ಪಡುತ್ತಿದ್ದಾರೆ. ಆಗ 1 ತೊಲ ಚಿನ್ನ ಕೇವಲ 113 ರೂ.ಗೆ ಲಭ್ಯವಿತ್ತು. ಇಂದಿನ ಚಿನ್ನದ ಬೆಲೆಗೆ ಹೋಲಿಸಿದರೆ ಈ ಬೆಲೆ ಅತ್ಯಲ್ಪ.
ಒಂದು ಕಾಲದಲ್ಲಿ ರೂಪಾಯಿ ಮೌಲ್ಯ ಬಹಳ ಕಡಿಮೆ ಇತ್ತು. ಜನರು ಕಡಿಮೆ ಬೆಲೆಗೆ ಏನು ಬೇಕಾದರೂ ಪಡೆಯಬಹುದಿತ್ತು. ಅನೇಕ ಬಾರಿ ಮನೆಯ ಹಿರಿಯರು, "ಒಂದು ರೂಪಾಯಿಗೆ ಇಷ್ಟು ಚಿನ್ನ ಸಿಗುತ್ತಿತ್ತು, ಅಷ್ಟು ಸಿಗುತ್ತಿತ್ತು... ಆದರೆ ಕೊಳ್ಳಲು ನಮ್ಮಲ್ಲಿ ಹಣವಿರಲಿಲ್ಲ" ಎಂದೆನ್ನುತ್ತಿದ್ದದ್ದನ್ನು ಕೇಳಿರಬಹುದು. ಆದರೆ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 75-72 ಸಾವಿರದ ಆಸುಪಾಸಿನಲ್ಲಿದೆ.
ಇದೀಗ 1959ರ ಚಿನ್ನದ ರಶೀದಿಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರಸೀದಿಯಲ್ಲಿ ಚಿನ್ನದ ಬೆಲೆ ನೋಡಿ ಜನರು ಆಶ್ಚರ್ಯ ಪಡುತ್ತಿದ್ದಾರೆ.
@upscworldofficial ಹೆಸರಿನ Instagram ಖಾತೆಯಲ್ಲಿ 1959 ರಿಂದ ಚಿನ್ನವನ್ನು ಖರೀದಿಸಿದ ರಸೀದಿಯನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ 1959 ರ ದಿನಾಂಕವನ್ನು ಬರೆಯಲಾಗಿದೆ. ಜೊತೆಗೆ 1 ಗ್ರಾಂ ಚಿನ್ನದ ಬೆಲೆಯನ್ನೂ ಬರೆಯಲಾಗಿದೆ. 66 ವರ್ಷದ ಹಿಂದಿನ ಬೆಲೆ ನೋಡಿದರೆ ಇಂದಿನ ದಿನಗಳಲ್ಲಿ ಚಾಕಲೇಟ್ ಬೆಲೆಯೂ ಅದಕ್ಕಿಂತ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಜನ.
ವೈರಲ್ ಆಗುತ್ತಿರುವ ಚಿತ್ರದ ಪ್ರಕಾರ, 1959 ರಲ್ಲಿ, 1 ತೊಲ (11.66 ಗ್ರಾಂ) ಚಿನ್ನದ ಬೆಲೆ ಕೇವಲ 113 ರೂ. ಮಹಾರಾಷ್ಟ್ರದ ವಾಮನ್ ನಿಂಬಾಜಿ ಎಂಬುವರ ಅಂಗಡಿಯ ಬಿಲ್ ಇದಾಗಿದ್ದು, ಮರಾಠಿಯಲ್ಲಿ ಬರೆಯಲಾಗಿದೆ. ಈ ರಸೀದಿ ಶಿವಲಿಂಗ ಆತ್ಮರಾಮ್ ಹೆಸರಿನಲ್ಲಿದ್ದು, ಅವರು 3 ತೊಲ ಚಿನ್ನ ಮತ್ತು ಬೆಳ್ಳಿ ಖರೀದಿಸಿ ಒಟ್ಟು 909 ರೂ. ಪಾವತಿ ಮಾಡಿದ್ದರು.
ಈ ಪೋಸ್ಟ್‌ಗೆ 38 ಸಾವಿರ ಲೈಕ್‌ಗಳು ಬಂದಿವೆ ಮತ್ತು ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.