ಈ ನೀರನ್ನು ಕೂದಲಿಗೆ ಸ್ಪ್ರೇ ಮಾಡಿದ್ರೆ ಸಾಕು: ಬಿಳಿಕೂದಲು ಮರಳಿ ಗಾಢ ಕಪ್ಪಾಗುವುದಲ್ಲದೆ ಮಾರುದ್ದ ಬೆಳೆಯುತ್ತೆ!
ಬೇವಿನ ಎಲೆಯ ನೀರು ಕೂದಲಿಗೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಇ, ವಿಟಮಿನ್ ಸಿ, ಲಿನೋಲಿಕ್ ಆಸಿಡ್, ಒಲೀಕ್ ಆಮ್ಲದಂತಹ ಪೋಷಕಾಂಶಗಳಿವೆ..
ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದರೆ ಬೇವಿನ ನೀರನ್ನು ಕೂದಲಿಗೆ ಸ್ಪ್ರೇ ಮಾಡಿ. ಇದರಿಂದ ಸೋಂಕು ನಿವಾರಣೆಯಾಗುತ್ತದೆ. ಎಣ್ಣೆ ಹಾಕುವಾಗ ಎಣ್ಣೆಯೊಂದಿಗೆ ಮಿಶ್ರಣ ಮಾಡುವ ಮೂಲಕವೂ ಈ ನೀರನ್ನು ಬಳಕೆ ಮಾಡಬಹುದು,
ಬೇವಿನ ನೀರನ್ನು ಕುದಿಸಿ ತಣ್ಣಗಾಗಿಸಿ ನಂತರ ಕೂದಲಿಗೆ ಮಸಾಜ್ ಮಾಡಿ. ಇದರ ಲಾಭವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ. ಅಂದರೆ ಹೇನುಗಳನ್ನು ಸಹ ನಿವಾರಿಸಲು ಇದು ಸಹಾಯಕ.
ಕೂದಲು ತುಂಬಾ ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ಉಗುರು ಬೆಚ್ಚಗಿನ ನೀರಿನಲ್ಲಿ ಬೇವಿನ ಪುಡಿಯನ್ನು ಬೆರೆಸಿ ಕೂದಲಿಗೆ ಮಸಾಜ್ ಮಾಡಿ. ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
ಬೇವಿನ ನೀರನ್ನು ಕೂದಲಿಗೆ ಅನ್ವಯಿಸುವುದರಿಂದ ಬಿಳಿ ಕೂದಲು ಕೂಡ ಕಪ್ಪಾಗುತ್ತದೆ. ಕೂದಲಿಗೆ ಈ ನೀರನ್ನು ಸ್ಪ್ರೇ ಮಾಡಿ, ಮಸಾಜ್ ಮಾಡಿದ್ರೆ ಸಾಕು. ಉತ್ತಮ ಫಲಿತಾಂಶ ಚಿಟಿಕೆಯಲ್ಲಿ ಗೋಚರಿಸುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಹೇಳಿಕೊಳ್ಳುವುದಿಲ್ಲ.