ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!
ಇತ್ತೀಚಿನ ದಿನಗಳಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ನರೆ ಕೂದಲಿನ ಸಮಸ್ಯೆ ಹಲವರನ್ನು ಬಾಧಿಸುತ್ತಿದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಉತ್ಪನ್ನಗಳು ಲಭ್ಯವಿವೆ. ಆದರೆ, ಇದು ಕೆಲವರಲ್ಲಿ ಅಡ್ಡಪರಿಣಾಮವನ್ನು ಉಂಟು ಮಾಡಬಹುದು.
ಆದರೆ, ನೀವು ಬಿಡಿಗಾಸು ಖರ್ಚು ಮಾಡದೆ ನಿಮ್ಮ ಮನೆಯಲ್ಲಿರುವ ಎರಡೇ ಎರಡು ಪದಾರ್ಥಗಳನ್ನು ಬಳಸಿ ಕೂದಲನ್ನು ಕಡು ಕಪ್ಪಾಗಿಸಬಹುದು.
ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಟೀ ಹಾಗೂ ಕಾಫಿ ಪೌಡರ್ ಬಳಸಿ ಬಿಳಿ ಕೂದಲಿನ ಸಮಸ್ಯೆ ನಿವಾರಿಸಬಹುದು.
ಇದಕ್ಕಾಗಿ ಒಂದು ಲೋಟ ನೀರಿನಲ್ಲಿ ಎರಡು ಚಮಚ ಟೀ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಶೋಧಿಸಿ ಇದರಲ್ಲಿ ಮೂರು ಚಮಚ ಕಾಫಿ ಪುಡಿಯನ್ನು ಮಿಶ್ರಣ ಮಾಡಿ.
ಟೀ-ಕಾಫಿ ಪುಡಿಯಿಂದ ತಯಾರಾದ ಈ ಹೇರ್ ಡೈ ಅನ್ನು ಕೂದಲಿಗೆ ಹಚ್ಚಿ 30-40 ನಿಮಿಷಗಳ ಬಳಿಕ ಸೌಮ್ಯ ಶಾಂಪೂವಿನಿಂದ ನಿಮ್ಮ ಹೇರ್ ವಾಶ್ ಮಾಡಿ.
ಈ ಮನೆಯಲ್ಲಿಯೇ ತಯಾರಿಸಿದ ಹೇರ್ ಡೈ ಅನ್ನು ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ, ಇದು ದಟ್ಟವಾದ ಕಾಂತಿಯುತ ಕೂದಲನ್ನು ಪಡೆಯಲು ಕೂಡ ಲಾಭದಾಯಕವಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.