ಕೇವಲ ಮೂರು ದಿನಗಳು ಅಷ್ಟೇ, ಬಳಿಕ ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜಕುಮಾರ ಎಂದೇ ಖ್ಯಾತ ಬುಧನ ಉದಯ ನೆರವೇಲಿದ್ದು, ಒಟ್ಟು ಮೂರು ರಾಶಿಗಳ ಜಾತಕದವರ ವೃತ್ತಿ ಜೀವನ ಹಾಗೂ ವ್ಯಾಪಾರದಲ್ಲಿ ಭಾರಿ ಯಶಸ್ಸು ಪ್ರಾಪ್ತಿಯಾಗಲಿದ್ದು, ಅವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ತುಲಾ ರಾಶಿ: ಕರ್ಕ ರಾಶಿಯಲ್ಲಿ ಬುಧನ ಉದಯ ತುಲಾ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಬುಧ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ನಿಮ್ಮ ವೃತ್ತಿ ಜೀವನದಲ್ಲಿ ಭಾರಿ ವೃದ್ಧಿಯಾಗಲಿದೆ. ಇದರಿಂದ ನಿಮ್ಮ ಭಾಗ್ಯೋದಯವಾಗಲಿದೆ. ಉದ್ಯಮಿಗಳಿಗೆ ಈ ಗೋಚರ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ವ್ಯಾಪಾರದಲ್ಲಿ ಉನ್ನತಿಯ ಯೋಗ, ವ್ಯಾಪಾರ ವಿಸ್ತಾರ ಯೋಗ ನಿರ್ಮಾಣಗೊಳ್ಳುತ್ತಿವೆ. ನೌಕರವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ನಿಮಗಿಂತ ಉನ್ನತ ಹಾಗೂ ಕನಿಷ್ಠ ವರ್ಗದ ಜನರ ಬೆಂಬಲ ನಿಮಗೆ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ಧನ ಪ್ರಾಪ್ತಿಯ ಹೊಸ ಮೂಲಗಳು ಸೃಷ್ಟಿಯಾಗಲಿವೆ.
ಮಿಥುನ ರಾಶಿ- ಕರ್ಕ ರಾಶಿಯಲ್ಲಿ ಬುಧನ ಉದಯ ನಿಮ್ಮ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಬುಧ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಉದಯಿಸಲಿದ್ದಾನೆ. ಇನ್ನೊಂದೆಡೆ ಬುಧ ಗ್ರಹ ನಿಮ್ಮ ಜಾತಕದ ಲಗ್ನ ಹಾಗೂ ಚತುರ್ಥ ಭಾವಕ್ಕೆ ಅಧಿಪತಿ ಕೂಡ ಹೌದು. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಇದರಿಂದ ನಿಮ್ಮ ಆತ್ಮ ವಿಶ್ವಾಸ ಅಪಾರ ಹೆಚ್ಚಳವನ್ನು ನೀವು ಗಮನಿಸಬಹುದು. ಈ ಅವಧಿಯಲ್ಲಿ ನೀವು ವಾಹನ, ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ವ್ಯಾಪಾರಿಗಳ ಪಾಲಿಗೂ ಕೂಡ ಈ ಗೋಚರ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ವ್ಯಾಪಾರದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬಾಳಸಂಗಾತಿಗೆ ಸಂಬಂಧಿಸಿದಂತೆ ಒಳ್ಳೆಯ ಸಮಾಚಾರ ನಿಮಗೆ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ.
ಮೀನ ರಾಶಿ: ಬುಧನ ಕರ್ಕ ರಾಶಿಯಲ್ಲಿನ ಉದಯ ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಬುಧ ಉದಯಿಸಲಿದ್ದಾನೆ. ಹೀಗಾಗಿ ಸಂತಾನ ಪಕ್ಷದ ಕಡೆಯಿಂದ ನಿಮಗೆ ಶುಭ ಸಮಾಚಾರ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಲವ್ ಲೈಫ್ ವಿಷಯದಲ್ಲಿಯೂ ಕೂಡ ಈ ಸಮಯ ಸಾಕಷ್ಟು ಅನುಕೂಲಕರವಾಗಿರಲಿದೆ. ಆಧ್ಯಾತ್ಮ, ಜೋತಿಷ್ಯ, ವಿಚಾರಕರು ಅಥವಾ ಕರ್ಮಕಾಂಡಗಳಿಗೆ ಸಂಬಂಧಿಸಿದ ಜನರ ಪಾಲಿಗೆ ಈ ಸಮಯ ಅದ್ಭುತವಾಗಿರಲಿದೆ. ಧನ ಪ್ರಾಪ್ತಿಯ ಹೊಸ ಅವಕಾಶಗಳು ಒದಗಿಬರಲಿದೆ, ಮತ್ತೊಂದೆಡೆ ಆಕಸ್ಮಿಕ ಧನಲಾಭ ಕೂಡ ಉಂಟಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)