ಇನ್ನೆರಡು ತಿಂಗಳಲ್ಲಿ ಈ ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ ! ಉಕ್ಕಿ ಬರುವುದು ಧನ
ಗುರು ಸೆಪ್ಟೆಂಬರ್ 11 ರಿಂದ ಡಿಸೆಂಬರ್ 20 ರವರೆಗೆ ವಕ್ರವಾಗಿ ಅಥವಾ ಹಿಮ್ಮುಖವಾಗಿ ಚಲನೆ ಆರಂಭಿಸಲಿದ್ದಾನೆ. ಗುರುವಿನ ಹಿಮ್ಮುಖ ಚಲನೆ ಕೆಲವು ರಾಶಿಯವರ ಜಾತಕದಲ್ಲಿ ಕೋಟ್ಯಾಧಿಪತಿಯಾಗುವ ಯೋಗವನ್ನು ಉಂಟು ಮಾಡುತ್ತದೆ. ಈ ನಾಲ್ಕು ತಿಂಗಳುಗಳ ಗುರು ಗ್ರಹದ ಕೃಪೆಯಿಂದ ಈ ರಾಶಿಯವರ ಜೀವನದಲ್ಲಿ ಎಲ್ಲವೂ ಸುಗಮವಾಗಿ ನಡೆಯುವುದು.
ಮೇಷ: ಯಶಸ್ಸು ನಿಮ್ಮ ಕೈಸೇರಲಿದೆ. ನೀವು ಮಾಡಬೇಕು ಅಂದುಕೊಳ್ಳುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ಉದ್ಯೋಗಕ್ಕೆ ಕೈ ಹಾಕಿದರೆ ಅಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಸಿಗಲಿದೆ.
ವೃಷಭ: ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ಆತಂಕ ನಿಮ್ಮಲ್ಲಿದೆ. ಆದರೆ, ನೀವು ಮಾಡುವ ಕೆಲಸಕ್ಕೆ ಉತ್ತಮ ಫಲ ಸಿಗಲಿದೆ. ನಿರಾತಂಕವಾಗಿ ಕೆಲಸದಲ್ಲಿ ಮುಂದುವರೆಯಿರಿ. ಗುರುವಿನ ಕೃಪೆ ನಿಮ್ಮ ಮೇಲಿರಲಿದೆ
ಮಿಥುನ: ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಚೇರಿಯಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಬಡ್ತಿಯ ಜೊತೆಗೆ ಸಂಬಳವೂ ಹೆಚ್ಚುತ್ತದೆ.
ಕರ್ಕ: ವ್ಯರ್ಥ ತಿರುಗಾಟ ಬರಲಿದೆ. ಕಚೇರಿಯಲ್ಲಿ ನಿಮಗೆ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಕೋಪದಿಂದ ನೀವಾಡುವ ಮಾತಿನಿಂದಲೇ ಅವಮಾನ ಎದುರಿಸಬೇಕಾಗುತ್ತದೆ. ಕಚೇರಿಯಲ್ಲಿ ಏನಾಗುತ್ತದೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ದೈಹಿಕ ಆರೋಗ್ಯ ಹದಗೆಡುತ್ತದೆ.
ಸಿಂಹ: ಮುಂದೂಡಲಾಗಿದ್ದ ಶುಭ ಕಾರ್ಯಗಳು ನೆರವೇರುವ ಕಾಲ. ಕೆಲಸದಲ್ಲಿ ಬಡ್ತಿ ಪಡೆದು ವೇತನ ಕೂಡಾ ಹೆಚ್ಚಾಗುವುದು. ನಿಮ್ಮ ಮನೆಯಲ್ಲಿ ಹಣದ ಮಳೆಯಾಗುತ್ತದೆ. ಅನಿರೀಕ್ಷಿತ ಆದಾಯ ಬರುವ ಸಾಧ್ಯತೆ ಇದೆ. ಪ್ರಭಾವ ಮತ್ತು ವಾಕ್ಚಾತುರ್ಯ ಹೆಚ್ಚಾಗುತ್ತದೆ.
ಕನ್ಯಾ: ಕುಟುಂಬದಲ್ಲಿ ಬಂಧುಗಳ ಜೊತೆ ಜಗಳವಾಗುವುದಕ್ಕಿಂತ ಸ್ವಲ್ಪ ಅನುಸರಿಸಿಕೊಂಡು ಹೋಗುವುದು ಒಳ್ಳೆಯದು. ಪತಿ-ಪತ್ನಿಯರ ನಡುವಿನ ಅನಗತ್ಯ ಜಗಳಗಳು ಮಾಯವಾಗುತ್ತವೆ. ಕಚೇರಿಯಲ್ಲಿ ನಿಮ್ಮ ಪ್ರತಿಭೆಗೆ ಬೆಲೆ ಸಿಗುತ್ತದೆ. ನಿರೀಕ್ಷಿತ ಬಡ್ತಿ ದೊರೆಯಲಿದೆ.
ತುಲಾ: ಗುರು ಗ್ರಹ ವಕ್ರ ನಡೆಯಲ್ಲಿ ಸಂಕ್ರಮಿಸುವ ಈ ಅವಧಿಯಲ್ಲಿ ಮನಸ್ಸಿನ ಆತಂಕ ದೂರವಾಗುವುದು. ನಿಮ್ಮ ಯೋಜನೆಗಳಿಗೆ ಸ್ಪಷ್ಟ ರೂಪು ರೇಷೆ ಸಿಗುವುದು. ಜೀವನದಲ್ಲಿ ನೆಮ್ಮದಿ ಮತ್ತು ಸಂತೋಷ ಹೆಚ್ಚಾಗುತ್ತದೆ. ರೋಗಗಳು ಮಾಯವಾಗಿ ಆರೋಗ್ಯ ವೃದ್ಧಿಯಾಗುತ್ತದೆ.
ವೃಶ್ಚಿಕ: ನಿಮ್ಮ ಬುದ್ಧಿಶಕ್ತಿ ಹೆಚ್ಚಲಿದೆ. ಹೊಸ ಉದ್ಯೋಗ ಪಡೆಯುವುದು ಸಾಧ್ಯವಾಗುವುದು. ಮಹಿಳೆಯರಿಗೆ ಚಿನ್ನ ಅಥವಾ ನಿಮಗೆ ಇಷ್ಟವಾದ ದುಬಾರಿ ವಸ್ತು ಖರೀದಿಸುವ ಯೋಗವಿದೆ. ಗೃಹ, ವಾಹನ ಖರೀದಿ ಯೋಗವೂ ಇದೆ.
ಧನು : ಗುರುವೀಣೆ ಹಿಮ್ಮುಖ ಚಲನೆ ವೇಳೆ ಧನು ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಧನು ರಾಶಿಯವರಿಗೆ ಗುರುವಿನ ಆಶೀರ್ವಾದದಿಂದ ನಿರೀಕ್ಷಿತ ಬಡ್ತಿ ದೊರೆಯಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಮಕರ: ಮಕರ ರಾಶಿಯವರು ಈ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಗರ್ಭಿಣಿಯರು ಉತ್ತಮ ಬಟ್ಟೆ ಧರಿಸಬೇಕು. ಆರೋಗ್ಯ ವೆಚ್ಚವೂ ಹೆಚ್ಚಾಗಲಿದೆ.
ಕುಂಭ: ಕುಂಭ ರಾಶಿಯವರಿಗೆ ವಕ್ರ ಗುರುವಿನ ಸಂಕ್ರಮಣದಿಂದ ಹಠಾತ್ ಖರ್ಚುಗಳು ಹೆಚ್ಚಾಗುವುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ.
Pisces ಮೀನ: ಮೀನ ರಾಶಿಯವರು ಯಾವುದೇ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿರುತ್ತಾರೆ. ನಿಂತು ಹೋಗಿರುವ ಮದುವೆ ಕಾರ್ಯಗಳು ಮತ್ತೆ ನೆರವೇರುವ ಸಮಯ ಕೂಡಿ ಬರಲಿದೆ.