ಇನ್ನೆರಡು ವಾರಗಳಲ್ಲಿ ಈ ರಾಶಿಯವರ ಎಲ್ಲಾ ಕಷ್ಟಗಳಿಗೂ ಶಾಶ್ವತ ಮುಕ್ತಿ .!
ಜ್ಯೋತಿಷ್ಯದ ಪ್ರಕಾರ 2023 ರ ಜನವರಿ 17 ರಂದು ಶನಿಯು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಲಿದೆ.
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಅಷ್ಟಮ ಶನಿಯಿಂದ ಮುಕ್ತಿ ಸಿಗಲಿದೆ. ಹೀಗಾಗಿ ಇಲ್ಲಿಯವರೆಗೆ ಅನುಭವಿಸುತ್ತಿದ್ದ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ.
ಧನುಸ್ಸು: ಧನು ರಾಶಿಯವರ ಏಳೂವರೆ ವರ್ಷದ ಶನಿ ದೆಸೆ ನಿವಾರಣೆಯಾಗಲಿದೆ. ಹಾಗಾಗಿ ಇನ್ನು ಮುಂದೆ ಕೈ ಇಟ್ಟ ಕೆಲಸಗಳಲ್ಲಿ ಯಶ ಸಿಗಲಿದೆ. ಮಾನಸಿಕ ಒತ್ತಡ ಮತ್ತು ರೋಗಗಳು ದೂರವಾಗುತ್ತವೆ. ಅದೃಷ್ಟ ನಿಮ್ಮ ಕಡೆಗೆ ಇರುತ್ತದೆ.
ತುಲಾ ರಾಶಿ : ಜನವರಿ 17 ರಂದು ತುಲಾ ರಾಶಿಯವರಿಗೆ ಶನಿಯ ದೆಸೆಯಿಂದ ಪರಿಹಾರ ದೊರೆಯಲಿದೆ. ಮಾನಸಿಕ ನೆಮ್ಮದಿ ಮತ್ತು ಶಾಂತಿ ಹೆಚ್ಚಾಗುವುದು.
ಕುಂಭ ರಾಶಿ : ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ಸಮಯದಲ್ಲಿ ಹಠಾತ್ ಧನ ಲಾಭವಾಗಲಿದೆ. ಕೆಲಸದಲ್ಲಿ ಹೊಸ ಅವಕಾಶಗಳು ಬರಲಿವೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)