ಅಮ್ಮ ಆದ್ರೂ ಅಂದ ತಗ್ಗಿಲ್ಲ, ಗ್ಯಾಪ್‌ ಕೊಟ್ಟು ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟ ಕಾಜಲ್ ಆಸ್ತಿ ಎಷ್ಟಿದೆ ಗೊತ್ತೆ..!

Wed, 19 Jun 2024-1:34 pm,

ಕಾಜಲ್‌, 2008 ರಲ್ಲಿ ಪಳನಿ ಚಿತ್ರದ ಮೂಲಕ ತಮಿಳು ಸಿನಿರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅದರ ನಂತರ, ಅವರು ಪೊಮ್ಮಲಟ್ಟಂ ಮತ್ತು ಮೋತಿ ಪರ್ಡಗು ಚಿತ್ರಗಳಲ್ಲಿ ನಟಿಸಿ ಕಾಲಿವುಡ್‌ಗೆ ಪರಿಚಿತರಾದರು. ರಾಜಮೌಳಿ ನಿರ್ದೇಶನ ಮಗಧೀರ ಸಿನಿಮಾ ಮೂಲಕ ಸೌತ್‌ ಸಿನಿರಂಗಕ್ಕೆ ಪರಿಚಯವಾದರು.

ಮಗಧೀರ ಚಿತ್ರದಲ್ಲಿ ರಾಮ್ ಚರಣ್ ಜೊತೆ ಕಾಜಲ್ ನಟಿಸಿದ್ದರು. ಈ ಚಿತ್ರಕ್ಕೆ ಸೌತ್‌ ಸಿನಿರಂಗದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. ಈ ಸಿನಿಮಾದ ನಂತರ ಕಾಜಲ್‌ ದಕ್ಷಿಣದಲ್ಲಿ ಜನಪ್ರಿಯ ನಟಿಯಾಗಿ ಹೊರಹೊಮ್ಮಿದರು. 

ತಮಿಳಿನಂತೆಯೇ ನಟಿ ಕಾಜಲ್ ತೆಲುಗಿನಲ್ಲೂ ಬಹು ಬೇಡಿಕೆ ಹೊಂದಿದ್ದಾರೆ. 2020 ರಲ್ಲಿ, ನಟಿ ಕಾಜಲ್ ಅಗರ್ವಾಲ್ ತನ್ನ ದೀರ್ಘಕಾಲದ ಗೆಳೆಯ ಗೌತಮ್ ಕಿಚಿಲು ಅವರನ್ನು ವಿವಾಹವಾದರು. ದಂಪತಿಗೆ 2022 ರಲ್ಲಿ ನೀಲ್ ಎಂಬ ಗಂಡು ಮಗು ಜನಿಸಿತು.

ಮಗನ ಜನನದ ನಂತರ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾಜಲ್ ʼಹೇ ಸಿನಾಮಿಕಾʼ, ʼಕೋಸ್ತಿʼ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಕಾಜಲ್ ಇಂಡಿಯನ್ 2 ಸಿನಿಮಾದಲ್ಲಿದ್ದಾರೆ. ಇಂಡಿಯನ್ 2 ಜುಲೈ 12 ರಂದು ತೆರೆಗೆ ಬರಲಿದೆ.

ಇಂಡಿಯನ್‌ 2 ಚಿತ್ರದ ಯಶಸ್ಸಿನ ನಂತರ ಕಾಜಲ್‌ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಟಿ ಇಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ಅವರ ಆಸ್ತಿಯ ಮೊತ್ತ ಬಹಿರಂಗವಾಗಿದೆ. ನಟಿ ರೂ.90 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ರತಿ ಚಿತ್ರಕ್ಕೆ ರೂ.2 ರಿಂದ ರೂ.4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಕಾಜಲ್‌ ಮುಂಬೈನಲ್ಲಿ 6 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದಲ್ಲದೇ ನಟಿಯ ಹತ್ತಿರ ಆಡಿ ಎ4, ರೇಂಜ್ ರೋವರ್, ಸ್ಕೋಡಾ ಆಕ್ಟೇವಿಯಾದಂತಹ ದುಬಾರಿ ಕಾರುಗಳಿವೆ. ಸಿನಿಮಾ ಅಲ್ಲದೆ ಕಾಜಲ್ ಅಗರ್ವಾಲ್ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಯನ್ನು ಹೊಂದಿದ್ದಾರೆ. ಅದರ ಮೂಲಕ ಕಾಜಲ್ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link