ಟ್ರಡೀಷನಲ್ ಲುಕ್‌ನಲ್ಲಿ ಪೋಸ್ ಕೊಟ್ಟ ಕಾಜಲ್ ಅಗರ್ವಾಲ್: ಇಲ್ಲಿವೆ ನೋಡಿ ಮೋಡಿಮಾಡುವ ಚಿತ್ರಗಳು
ಸಿನಿಮಾ ಪ್ರೇಕ್ಷಕರಿಗೆ ಕಾಜಲ್ ಅಗರ್ವಾಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಚಿತ್ರರಂಗದಲ್ಲಿ ಸುದೀರ್ಘ ಅವಧಿಗೆ ವೃತ್ತಿಜೀವನವನ್ನು ಮುಂದುವರಿಸಿದ ನಾಯಕಿಯರಲ್ಲಿ ಈ ಸುಂದರ ತಾರೆ ಕೂಡ ಒಬ್ಬರು. ಮದುವೆಯ ನಂತರ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದ ಕಾಜಲ್ ಇದೀಗ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ.
ಕಾಜಲ್ ಇತ್ತೀಚೆಗೆ ಪೊಲೀಸ್ ಅಧಿಕಾರಿಯಾಗಿ ಸತ್ಯ ಭಾಮ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರ ವಿಮರ್ಶಕರರ ಮೆಚ್ಚಿಗೆಗೆ ಪಾತ್ರವಾಗಿದೆ.
ಶೀಘ್ರದಲ್ಲೆ ಕಾಜಲ್ ಕಮಲ್ ಹಾಸನ್ ಅವರೊಂದಿಗೆ ಇಂಡಿಯನ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ಅಷ್ಟೆ ಅಲ್ಲದೆ ಖಾಸಗಿ ಚಾನೆಲ್‌ನ ರಿಯಾಲಿಟಿ ಶೋ ಒಂದಕ್ಕೆ ಕಾಜಲ್ ಜಡ್ಜ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿನಿಮಾಗಳಲ್ಲಷ್ಟೇ ಅಲ್ಲದೆ ಕಾಜಲ್ ಅಗರ್ವಾಲ್ ಸಾಮಾಜಿಕ ಜಾಲತಾನಗಳಲ್ಲಿಯೂ ಸಕ್ರಿಯಾವಾಗಿದ್ದಾರೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಜಲ್ ಟ್ರಡೀಷನಲ್ ಉಡುಪು ತೊಟ್ಟು ಫೋಸ್ ಕೊಟ್ಟ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಾಜಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
ಕಾಜಲ್ ಅಗರ್ವಾಲ್... ಈ ನಟಿಯ ಬಗ್ಗೆ ಸ್ಪೆಷಲ್ ಪರಿಚಯ ಅಗತ್ಯವಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ತಮ್ಮ ನಟನೆಯಿಂದ ಮೋಡಿ ಮಾಡಿರುವ ನಟಿ. ಮದುವೆ, ಮಗು ಅಂತ ಬ್ಯುಸಿಯಾಗಿದ್ದ ನಟಿ ಹಂತ ಹಂತವಾಗಿ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗ್ತಾ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಂಪ್ರಾದಾಯಿಕ ಉಡುಪು ಧರಿಸಿ ಪೋಸ್ ಕೊಟ್ಟ ಫೋಟೋಸ್ ಅನ್ನು ಕಾಜಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.