SRH ಒಡತಿ ಕಾವ್ಯಾ ಮಾರನ್ ತಂದೆ ಯಾರು ಗೊತ್ತೇ.. ಕರುಣಾನಿಧಿಗೆ ಏನು ನಂಟು? ತಾಯಿ, ಚಿಕ್ಕಪ್ಪ, ಅಜ್ಜ ಎಲ್ಲರೂ ಪ್ರಭಾವಿ ನಾಯಕರೇ !!

Thu, 30 May 2024-9:37 am,

Who Is Kavya Maran: ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ದೇಶದ ಹಿರಿಯ ಉದ್ಯಮಿ. ಸನ್ ಗ್ರೂಪ್‌ನ ಮಾಲೀಕರಾಗಿದ್ದಾರೆ. ಕಲಾನಿಧಿ ಮಾರನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಸಂಸ್ಥಾಪಕರೂ ಆಗಿದ್ದಾರೆ. 

ಫೋರ್ಬ್ಸ್‌ನ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಲಾನಿಧಿ ಮಾರನ್ 82ನೇ ಸ್ಥಾನದಲ್ಲಿದ್ದಾರೆ. ಕಲಾನಿಧಿ ಮಾರನ್ ಅವರ ಒಟ್ಟು ಸಂಪತ್ತು $2.85 ಬಿಲಿಯನ್ ಅಂದರೆ 23,000 ಕೋಟಿ ರೂ. ಆಗಿದೆ. 

ಕಲಾನಿಧಿ ಮಾರನ್ ವಿಶಾಲ ಮಾಧ್ಯಮ ಸಾಮ್ರಾಜ್ಯವನ್ನೇ ಸ್ಥಾಪಿಸಿದವರು. ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಇವರನ್ನು 'ಭಾರತದ ದೂರದರ್ಶನದ ಕಿಂಗ್' ಎಂದೇ ಕರೆದಿದ್ದಾರೆ. ಕಲಾನಿಧಿ ಮಾರನ್ ದೂರದರ್ಶನ ವಾಹಿನಿಗಳು, ಪತ್ರಿಕೆಗಳು, ವಾರಪತ್ರಿಕೆಗಳು, FM ರೇಡಿಯೋ ಕೇಂದ್ರಗಳು, DTH ಸೇವೆಗಳು ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.

ಕಲಾನಿಧಿ ಮಾರನ್ 2010 ರಿಂದ 2015 ರವರೆಗೆ ಸ್ಪೈಸ್‌ಜೆಟ್ ಏರ್‌ಲೈನ್‌ನಲ್ಲಿ ಪಾಲನ್ನು ಹೊಂದಿದ್ದರು. ಅವರ ಪ್ರಸ್ತುತ ನಿವ್ವಳ ಮೌಲ್ಯ 23,633 ಕೋಟಿ ರೂ. ಅಪಾರ ಸಂಪತ್ತಿನ ಕಾರಣದಿಂದ ತಮಿಳುನಾಡು ರಾಜ್ಯದಿಂದ IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2019 ರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಇನ್ನೂ ಕಾವ್ಯಾ ಮಾರನ್‌ ಚಿಕ್ಕಪ್ಪ ಅಂದರೆ ಕಲಾನಿಧಿ ಮಾರನ್ ಅವರ ಸೋದರ ದಕ್ಷಿಣದ ಹಿರಿಯ ರಾಜಕೀಯ ನಾಯಕರಾಗಿದ್ದು, ಎಂ. ಕರುಣಾನಿಧಿ ಅವರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ.

ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ತಮಿಳುನಾಡು ಮಾಜಿ ಸಿಎಂ ಎಂ.ಕರುಣಾನಿಧಿ ಅವರ ಮೊಮ್ಮಗ. ಕಾವ್ಯಾ ಮಾರನ್ ಅವರ ಅಜ್ಜ ಮತ್ತು ಕಲಾನಿಧಿ ಮಾರನ್ ಅವರ ತಂದೆ ಭಾರತದ ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್.

ಕಲಾನಿಧಿ ಮಾರನ್ ಅವರ ಕಿರಿಯ ಸಹೋದರ ಮತ್ತು ಕಾವ್ಯಾ ಮಾರನ್ ಅವರ ಚಿಕ್ಕಪ್ಪ ದಯಾನಿಧಿ ಮಾರನ್ ತಮಿಳುನಾಡಿನ ಹಿರಿಯ ರಾಜಕೀಯ ನಾಯಕ. ಮಾಜಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕಲಾನಿಧಿ ಮಾರನ್ ಅವರ ಪತ್ನಿ ಮತ್ತು ಕಾವ್ಯಾ ಮಾರನ್ ಅವರ ತಾಯಿಯ ಹೆಸರು ಕಾವೇರಿ.

ಕಾವ್ಯಾ ಮಾರನ್ ಪ್ರಸ್ತುತ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಹ ಸಂಸ್ಥಾಪಕಿ. ಕಾವ್ಯಾ ಮಾರನ್ ಅವರ ಆಸ್ತಿ 50 ಮಿಲಿಯನ್ ಡಾಲರ್ ಅಂದರೆ ಸುಮಾರು 409 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕಾವ್ಯಾ ಮಾರನ್ ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಯುಕೆಯ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್‌ನಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಪದವಿಯನ್ನು ಪಡೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link