25ರ ಹರೆಯದಲ್ಲಿ 52 ವರ್ಷದ ವ್ಯಕ್ತಿ ಜೊತೆ ಮದುವೆ - ಡಿವೋರ್ಸ್‌, ಬಾಯ್ಸ್‌ ಜೊತೆ ಡೇಟಿಂಗ್‌..! ಸಧ್ಯ ಸಿಂಗಲ್‌ ಆದ್ರೂ 1 ಒಂದು ಮಗುವಿದೆ

Wed, 20 Nov 2024-7:47 pm,

ಕಲ್ಕಿ ಕೆಕ್ಲಾನ್ ಅವರು ಫ್ರೆಂಚ್ ನಟಿಯಾಗಿದ್ದರೂ, ಅವರು ಅನೇಕ ಸೂಪರ್‌ ಹಿಟ್‌ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲ್ಕಿ ಸಿನಿ ಜರ್ನಿಯಂತೆ ಅವರ ಲವ್‌ ಸ್ಟೋರಿಗಳು ತುಂಬಾ ಇಂಟ್ರಸ್ಟಿಂಗ್‌ ಆಗಿವೆ.   

ಈಕೆ 'ಗ್ಯಾಂಗ್ ಆಫ್ ವಾಸೇಪುರ್' ಚಿತ್ರಗಳ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮಾಜಿ ಪತ್ನಿಯೂ ಹೌದು.  

ಕಲ್ಕಿ 10 ಜನವರಿ 1984 ರಂದು ಪುದುಚೇರಿಯಲ್ಲಿ ಜನಿಸಿದರು. ಅವರ ಪೋಷಕರು ಫ್ರೆಂಚ್. ಫ್ರಾನ್ಸ್ನಿಂದ ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು.   

ಈಕೆ ಸ್ಟ್ರಕ್ಚರಲ್ ಇಂಜಿನಿಯರ್ ಮೌರಿಸ್ ಕೆಕ್ಲಾನ್ ಅವರ ಮೊಮ್ಮಗಳು. ಅದೇ ಮೋರಿಸ್ ಐಫೆಲ್ ಟವರ್ ಮತ್ತು ಲಿಬರ್ಟಿ ಪ್ರತಿಮೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.  

ಕಲ್ಕಿ ಊಟಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದರು. ಅನಂತರ ನಟನೆ ಮೇಲಿನ ಆಸಕ್ತಿಯಿಂದ 18ನೇ ವಯಸ್ಸಿನಲ್ಲಿ ಲಂಡನ್‌ಗೆ ತೆರಳಿ, ಅಲ್ಲಿ ರಂಗಭೂಮಿ ಮತ್ತು ನಾಟಕವನ್ನು ಅಧ್ಯಯನ ಮಾಡಿದರು. ಓದು ಮುಗಿಸಿ ಮತ್ತೆ ಭಾರತಕ್ಕೆ ಬಂದು ಚಿತ್ರರಂಗದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಿದಳು.  

ಕಲ್ಕಿ ಕೆಕ್ಲಾನ್ ಅನುರಾಗ್ ಕಶ್ಯಪ್ ಅವರ ದೇವ್ ಡಿ ಚಿತ್ರಕ್ಕಾಗಿ ಆಡಿಷನ್ ನಡೆಸಿ ಆಯ್ಕೆಯಾದರು. ಇಲ್ಲಿ ಕಲ್ಕಿ ಕೆಕ್ಲಾನ್ ಅನುರಾಗ್ ಅವರನ್ನು ಭೇಟಿಯಾದರು. ಇಬ್ಬರ ಸ್ನೇಹ ಮದುವೆಗೆ ಕಾರಣವಾಯಿತು. ಇಬ್ಬರ ನಡುವೆ 14 ವರ್ಷದ ವ್ಯತ್ಯಾಸವಿತ್ತು.  

ಕಲ್ಕಿ ಕೆಕ್ಲಾನ್ 2011 ರಲ್ಲಿ ಊಟಿಯಲ್ಲಿ ಅನುರಾಗ್ ಕಶ್ಯಪ್ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಎರಡು ವರ್ಷಗಳ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಅಂತಿಮವಾಗಿ 2015 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.  

ಸಂದರ್ಶನವೊಂದರಲ್ಲಿ ಕಲ್ಕಿ ಕೆಕ್ಲಾನ್ ಅವರು ಮದುವೆಗೂ ಮುನ್ನ ಅನೇಕ ಸಂಬಂಧಗಳನ್ನು ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ.    

ಕಲ್ಕಿ ಕೇಕ್ಲಾ ಸೆಪ್ಟೆಂಬರ್ 30, 2019 ರಂದು ಗೆಳೆಯ ಗೈ ಹರ್ಷ್‌ಬರ್ಗ್ ಅವರೊಂದಿಗೆ ಗರ್ಭಧಾರಣೆಯನ್ನು ಘೋಷಿಸಿದರು. ಅವರಿಗೆ 7 ಫೆಬ್ರವರಿ 2020 ರಂದು ಜನಿಸಿದ ಮಗಳಿದ್ದಾಳೆ.   

ಆ ಸಮಯದಲ್ಲಿ ಕಲ್ಕಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ನಂತರ ಸಂದರ್ಶನವೊಂದರಲ್ಲಿ ತಮಗೆ ಮದುವೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link