Kamal Hassan: ‘ಸಕಲಕಲಾವಲ್ಲಭ’ ಕಮಲ್ ಹಾಸನ್ ಮಾಜಿ ಗರ್ಲ್‌ಫ್ರೆಂಡ್ಸ್‌ ಪಟ್ಟಿ ಇಲ್ಲಿದೆ...!

Tue, 07 Nov 2023-4:40 pm,

ಸ್ಟಾರ್ ಹೀರೋ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಕಮಲ್ ಹಾಸನ್ ಆಗಾಗ ತಮ್ಮ ಓಪನ್ ಸ್ಟೇಟ್​ಮೆಂಟ್ ಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಕಮಲ್‌ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಬ ಶುರುವಾಗಿದ್ದು,  ಅವರು ತಮ್ಮ ಯೌವನದಲ್ಲಿ ಅನೇಕ ಪ್ರಣಯ ಮತ್ತು ವೈವಾಹಿಕ ಸಂಬಂಧಗಳನ್ನು ಹೊಂದಿದ್ದರು ಎನ್ನಲಾಗುತ್ತಿದೆ.  

ಅದರಲ್ಲಿ ನಟಿ ಶ್ರೀದಿವ್ಯಾ ಹಲವಾರು ಚಿತ್ರಗಳಲ್ಲಿ ಕಮಲ್ ಜೊತೆಯಾಗಿ ನಟಿಸಿದ್ದಾರೆ. ಕೆಲ ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಅವರು ಎಲ್ಲಿಯೂ ಅದರ ಬಗ್ಗೆ ಮಾತನಾಡಲಿಲ್ಲ.   

ಕಮಲ್ 1988 ರಲ್ಲಿ ಭರತನಾಟ್ಯ ಕಲಾವಿದೆ ವಾಣಿ ಗಣಪತಿ ಅವರನ್ನು ವಿವಾಹವಾದರು. ಪ್ರೀತಿಯಿಂದ ಆರಂಭವಾದ ಇವರ ದಾಂಪತ್ಯ ಜೀವನ 10 ವರ್ಷಗಳ ನಂತರ ವಿಚ್ಛೇದನದಲ್ಲಿ ಅಂತ್ಯವಾಯಿತು.   

ಕಮಲ್ 1988 ರಲ್ಲಿ ಹಿಂದಿ ನಟಿ ಸಾರಿಕಾ ಅವರನ್ನು ಮದುವೆಯಾದರು. ಅವರಿಗೆ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ 16 ವರ್ಷಗಳ ದಾಂಪತ್ಯದ ನಂತರ 2004 ರಲ್ಲಿ ವಿಚ್ಛೇದನ ಪಡೆದರು.   

ಸಿಮ್ರಾನ್ ಮತ್ತು ಕಮಲ್ ಹಾಸನ್ ಕೆಲವು ವರ್ಷಗಳಿಂದ ಪ್ರಣಯ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಕಮಲ್ ಗಿಂತ ಸಿಮ್ರಾನ್ 22 ವರ್ಷ ಚಿಕ್ಕವಳಾಗಿದ್ದರಿಂದ ಈ ಸಂಬಂಧ ವಿವಾದಕ್ಕೆ ಕಾರಣವಾಗಿತ್ತು. ಪಂಚ ತಂತ್ರಂ ಬಿಡುಗಡೆಯಾದ ನಂತರ ಈ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗಿದೆ.   

ಕಮಲ್ ಹಾಸನ್-ಗೌತಮಿ 2004 ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು... ಅವರ ಈ ಸಂಬಂಧವು 2016 ರಲ್ಲಿ ಕೊನೆಗೊಂಡಿತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link