Wedding Photos : ಸಪ್ತಪದಿ ತುಳಿದ ಕಿರುತೆರೆ ಜೋಡಿ.!

Fri, 14 Oct 2022-10:31 am,

'ಕಮಲಿ' ಧಾರಾವಾಹಿ ಅನಿಕಾ ಪಾತ್ರಧಾರಿ ಗೇಬ್ರಿಯೆಲಾ ಹಾಗೂ ಸುಹಾಸ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. 

ಮದುವೆಯ ಫೋಟೋಗಳನ್ನು ಗೇಬ್ರಿಯೆಲಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. 

ಗೇಬ್ರಿಯೆಲಾ ಅಲಿಯಾಸ್ ರಚನಾ ಕಮಲಿ ಧಾರಾವಾಹಿಯಲ್ಲಿ ಅನಿಕಾ ಪಾತ್ರ ಮಾಡುತ್ತಿದ್ದಾರೆ. ಸುಹಾಸ್ ಅವರು ಶಂಭು ಪಾತ್ರ ಮಾಡುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಧಾರಾವಾಹಿ, ಸಿನಿಮಾಗಳಲ್ಲಿ ಗೇಬ್ರಿಯೆಲಾ ನಟಿಸುತ್ತಿದ್ದಾರೆ.

ಕಮಲಿ ಸೇರಿದಂತೆ ಮರಳಿ ಮನಸಾಗಿದೆ, ನಿನ್ನಿಂದಲೇ, ಮಂಗಳಗೌರಿ ಮದುವೆ ಮುಂತಾದ ಧಾರಾವಾಹಿಗಳು, ಸಿನಿಮಾದಲ್ಲಿ ಸುಹಾಸ್  ನಟಿಸಿದ್ದಾರೆ. ಅಲ್ಲದೇ, ಡಬ್ಬಿಂಗ್ ಆರ್ಟಿಸ್ಟ್ ಗಿ ಸಹ ಕೆಲಸ ಮಾಡುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link