ಆ ವಿಚಾರ ಗೊತ್ತಾದ್ರೆ ನನ್ನ ಗಂಡ ನನ್ನ ಜೊತೆ ಇರಲ್ಲ..! 37 ವಯಸ್ಸಾದ್ರೂ ಮದುವೆಯಾಗದಕ್ಕೆ ಕಂಗಾನಾ ಕ್ಲಾರಿಟಿ

Sun, 01 Sep 2024-8:41 pm,

ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ ತಮ್ಮ ಮದುವೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮದುವೆಗೆ ಮಾಡಿಕೊಳ್ಳಲು ಇಷ್ಟಪಡುತ್ತೇನೆ ಆದರೆ ನನಗೆ ಒಂದು ಸಮಸ್ಯೆ ಇದೆ ಎಂದು ಬಾಂಬ್ ಸಿಡಿಸಿದ್ದಾರೆ.  

ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ‘ನಟನೋ, ರಾಜಕಾರಣಿಯೋ... ಯಾರನ್ನ ಮದುವೆಯಾಗಲು ಬಯಸುತ್ತಾರಾ’ ಎಂಬ ಪ್ರಶ್ನೆಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.  

ಮದುವೆ ಬಗ್ಗೆ ನನಗೆ ಅಭ್ಯಂತರವಿಲ್ಲ, ಸಂಗಾತಿ ಬೇಕು, ಜೀವನದಲ್ಲಿ ಪ್ರತಿಯೊಬ್ಬರಿಗೂ ಮದುವೆಯಾಗಲೇಬೇಕು ಅಂತ ಕಂಗನಾ ಹೇಳಿದ್ದಾರೆ.  

ಆದರೆ ನನ್ನ ಮೇಲೆ ನೆಗೆಟಿವ್ ಪ್ರಚಾರವಿದೆ, ಅದರಿಂದಾಗಿ ಕುಖ್ಯಾತಿಗೆ ಒಳಗಾಗಿದ್ದೇನೆ.. ಈ ಕಾರಣದಿಂದ ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಅಂತ ಕಂಗನಾ ಬಹಿರಂಗಪಡಿಸಿದ್ದಾರೆ.  

ಇದಲ್ಲದೇ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳಿವೆ. ಮದುವೆಯ ನಂತರ ನನಗೆ ಸಮನ್ಸ್ ಬಂದರೆ, ನನ್ನ ಸಂಬಂಧಿಕರು ಅವುಗಳನ್ನ ನೋಡಿ ಓಡಿಹೋಗುತ್ತಾರೆ ಅಂತ ಕಂಗನಾ ತಿಳಿಸಿದರು.  

ಕಂಗನಾ ರಣಾವತ್ ಅವರ ಇತ್ತೀಚಿನ ಚಿತ್ರ 'ಎಮರ್ಜೆನ್ಸಿ'. ಇದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ರಾಜಕೀಯ ಜೀವನವನ್ನು ಆಧರಿಸಿದೆ.   

ಅನುಪಮ್ ಖೇರ್ ಮತ್ತು ಮಹಿಮಾ ಚೌಧರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link