15ನೇ ವಯಸ್ಸಿಗೆ ಮನೆ ತೊರೆದಿದ್ದ ಬಾಲಕಿ, ಇಂದು ಸ್ಟಾರ್‌ ನಟಿ, ಮೊದಲ ಚುನಾವಣೆಯಲ್ಲಿಯೇ ಸಂಸದೆಯಾಗಿ ಆಯ್ಕೆ..!

Wed, 05 Jun 2024-9:00 pm,

ಆಕೆ ಬೇರೆ ಯಾರೂ ಅಲ್ಲ ಬಿಟೌನ್‌ ಕ್ವೀನ್‌ ನಟಿ ಕಂಗನಾ ರಣಾವತ್. ಕಂಗನಾ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಾಂಬಿಯಾ ಪಟ್ಟಣದಲ್ಲಿ ರಜಪೂತ ಕುಟುಂಬದಲ್ಲಿ ಜನಿಸಿದರು. ತಾಯಿ ಆಶಾ ಶಾಲಾ ಶಿಕ್ಷಕಿ, ತಂದೆ ಅಮರದೀಪ್ ಉದ್ಯಮಿ. ಕಂಗನಾಗೆ ಒಬ್ಬ ಅಕ್ಕ ಮತ್ತು ಕಿರಿಯ ಸಹೋದರ ಕೂಡ ಇದ್ದಾರೆ. ಕಂಗನಾಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಆದರೆ ಪೋಷಕರು ಅದಕ್ಕೆ ಒಪ್ಪಲಿಲ್ಲ.  

ಇದರಿಂದಾಗಿ ಕಂಗನಾ 15ನೇ ವಯಸ್ಸಿಗೆ ಮನೆ ಬಿಟ್ಟು ಮುಂಬೈಗೆ ಓಡಿಹೋಗಿ ಸಿನಿರಂಗ ಸೇರಿಕೊಂಡರು. ಆಗ ಇರಲು ಜಾಗ ಸಿಗದ ಕಾರಣ ಫ್ಲಾಟ್ ಫಾರಂನಲ್ಲಿ ಮಲಗಿ.. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ.. ಅವಕಾಶಗಳನ್ನು ಹುಡುಕುತ್ತಾ.. ಕೆಟ್ಟವರಿಂದ ತನ್ನನ್ನು ರಕ್ಷಿಸಿಕೊಂಡು ಬದುಕು ಸಾಗಿಸುತ್ತಿದ್ದ ಕಂಗನಾಗೆ 19ನೇ ವಯಸ್ಸಿನಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.   

ಅನುರಾಜ್ ಬಸು ನಿರ್ದೇಶನದ ಗ್ಯಾಂಗ್‌ಸ್ಟರ್ ಚಿತ್ರದ ಮೂಲಕ ಕಂಗನಾ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿನ ಅವರ ಅಭಿನಯವನ್ನು ವಿಮರ್ಶಕರು ಸಹ ಹೊಗಳಿದರು, ಆ ನಂತರ ಚಲನಚಿತ್ರವು ಕಂಗನಾಗೆ ಬಾಲಿವುಡ್‌ನಲ್ಲಿ ದೊಡ್ಡ ಯಶಸ್ಸನ್ನು ಗಳಿಸಿತು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದರು.   

ನಂತರ, ಕಂಗನಾ ವಿಭಿನ್ನ ಕಥಾಹಂದರವುಳ್ಳ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು ಮತ್ತು ಕ್ವೀನ್, ಮಣಿಕರ್ಣಿಕಾ ಮತ್ತು ತನು ವೆಟ್ಸ್ ಮನು ಚಿತ್ರಗಳಲ್ಲಿ ಸ್ಟಾರ್ ಸ್ಥಾನಮಾನವನ್ನು ಗಳಿಸಿದರು. ಈ ಎಲ್ಲಾ ಸಿನಿಮಾಗಳು ಆಕೆ ನಾಯಕಿಯಾಗಿ ನಟಿಸಿದ ಸಿನಿಮಾಗಳು ಅಷ್ಟೇ ಅಲ್ಲ, ಟಾಲಿವುಡ್ ನಲ್ಲೂ ಏಕಾ ನಿರಂಜನ್ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.   

ಅದೂ ಅಲ್ಲದೆ, ಕಂಗನಾ ಅಭಿನಯದ ತನು ವೆಡ್ಸ್ ಮನು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 100 ಕೋಟಿ ದಾಟಿದ ಮೊದಲ ನಾಯಕಿ ಕೇಂದ್ರಿತ ಚಿತ್ರವಾಯಿತು. ಆ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಖ್ಯಾತಿ ಪಡೆದರು.   

ಬಾಲಿವುಡ್ ನಿಂದ ದೂರ ಸರಿದಿದ್ದರೂ ಇಂಡಸ್ಟ್ರಿಯಲ್ಲಿ ತನಗೊಂದು ವಿಶೇಷ ಸ್ಥಾನ ಗಳಿಸಿ ನಟಿಯಾಗಿ ಬೆಳೆದರು. ರಾಜಕೀಯದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದ ಕಂಗನಾ ಬಿಜೆಪಿಯನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ.. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.  

ಕಂಗನಾ ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸದೆಯಾಗಿ ಸ್ಪರ್ಧಿಸಿ 5,37,022 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ನಟಿಯಾಗಿರುವುದರ ಜೊತೆಗೆ, ಕಂಗನಾ ಮಾಸ್ ಹಿಟ್ ಮಣಿಕರ್ಣಿಕಾ ಮೂಲಕ ನಿರ್ದೇಶಕಿಯಾಗಿಯೂ ಪಾದಾರ್ಪಣೆ ಮಾಡಿದರು. ಪ್ರಸ್ತುತ ಅವರು ಇಂದಿರಾ ಗಾಂಧಿಯವರ ಜೀವನಾಧಾರಿತ ಚಿತ್ರವನ್ನು ತಮ್ಮದೇ ನಿರ್ದೇಶನದಲ್ಲಿ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link