ಸುದೀಪ್ಗೆ ತಾಯಿ ಅಂದ್ರೆ ಬೇರೆಯದ್ದೇ ಪ್ರಪಂಚ; ʼಅಮ್ಮʼ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿದ ಕಿಚ್ಚ..!
ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಪ್ರೀತಿಯ ಅಮ್ಮನ ಅಗಲಿಕೆಯನ್ನು ಕಿಚ್ಚನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಅಮ್ಮನ ಸಾವಿನ ಬಳಿಕ ನೋವಿನಲ್ಲಿರುವ ಕಿಚ್ಚ ಸುದೀಪ್ ಅವರು ಈಗಲೂ ತಾಯಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದಾರೆ. ತಾಯಿ ಸರೋಜಾ ಅವರು ಕೂರುತ್ತಿದ್ದ ಕುರ್ಚಿಗೆ ಪ್ರತಿನಿತ್ಯ ಗೌರವ ಸಲ್ಲಿಸುತ್ತಿದ್ದಾರೆ.
ಅಷ್ಟೇ ಅಲ್ಲ ತಾಯಿ ಸರೋಜಾ ಅವರು ಹಾಕುತ್ತಿದ್ದ ಪಾದರಕ್ಷೆಗೆ ಒಂದು ಪೀಠವನ್ನೇ ಮಾಡಿರುವ ಸುದೀಪ್ ಅವರು ಪ್ರತಿನಿತ್ಯವೂ ತಪ್ಪದೇ ಪೂಜೆ ಸಲ್ಲಿಸುತ್ತಿದ್ದಾರೆ.
ನಟ ಸುದೀಪ್ಗೆ ತಾಯಿ ಅಂದರೆ ಬೇರೆಯದ್ದೇ ಪ್ರಪಂಚ. ತಾಯಿಯನ್ನು ಕಳೆದುಕೊಂಡಿರುವ ಅವರು ಪ್ರತಿದಿನವೂ ಅಮ್ಮನ್ನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ಕಿಚ್ಚ ಪ್ರತಿದಿನವೂ ಪೂಜಿಸುತ್ತಿದ್ದಾರೆ.
ಪ್ರೀತಿಯ ಅಮ್ಮ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿರುವ ಅಭಿನಯ ಚಕ್ರವರ್ತಿಗೆ ತಾಯಿಯ ಮೇಲಿನ ಪ್ರೀತಿ ಎಷ್ಟಿತ್ತು ಅಂತಾ ತೋರಿಸುತ್ತದೆ.