ತೆಲುಗು ಬಿಗ್ ಬಾಸ್ ಪಟ್ಟ ಗೆದ್ದ ಕನ್ನಡದ ನಟ!ಕನ್ನಡದ ಈ ಧಾರಾವಾಹಿಯಲ್ಲಿ ಮಿಂಚಿ ಮನೆ ಮಾತಾಗಿರುವ ನಿಖಿಲ್
ಬಿಗ್ ಬಾಸ್' ತೆಲುಗು ಸೀಸನ್ 8ರಲ್ಲಿ ಈ ಬಾರಿ ಕನ್ನಡದ ಕಲರವ ಇತ್ತು. ಕನ್ನಡ ನಾಲ್ಕು ಮಂದಿ ನಟ ನಟಿಯರು ಈ ಬಾರಿ ತೆಲುಗು ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು.
ನಿಖಿಲ್ ಮಲಿಯಕ್ಕಲ್, ಪ್ರೇರಣಾ ಕಂಬಂ, ಯಶಮಿ ಗೌಡ, ಪೃಥ್ವಿರಾಜ್ ಈ ನಾಲ್ಕು ಮಂದಿ ತೆಲುಗು ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಪಾಕಿ ಇಬ್ಬರು ಫಿನಾಲೆವರೆಗೂ ತಲುಪಿದ್ದರು.
ಇದೀಗ ಈ ನಾಲ್ಕು ಜನರ ಪೈಕಿ ಕನ್ನಡದ ನಿಖಿಲ್ ಮಲಿಯಕ್ಕಲ್ ಗೆ ತೆಲುಗು ಸೀಸನ್ 8ರ ವಿನ್ನರ್ ಪಟ್ಟ ಸಿಕ್ಕಿದೆ. 105 ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿದ್ದು, ಗೆಲುವು ಪಡೆದುಕೊಂಡಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸೇರಿದಂತೆ ಒಟ್ಟು 22 ಮಂದಿ ಸ್ಪರ್ಧಿಗಳನ್ನು ಹಿಂದಿಕ್ಕಿ ನಿಖಿಲ್ ವಿಜೇತ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸೀಸನ್ ಗೆದ್ದ ನಿಖಿಲ್‌ಗೆ 55 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ.
ಒಟ್ಟು 22 ಮಂದಿಯಲ್ಲಿ ತೆಲುಗು ಬಿಗ್ ಬಾಸ್ 8ರ ಫಿನಾಲೆ ತಲುಪಿದ್ದು, ನಿಖಿಲ್, ಗೌತಮ್, ನಬೀಲ್, ಪ್ರೇರಣ ಕಂಬಂ, ಅವಿನಾಶ್ ಮಾತ್ರ. ನಿಖಿಲ್‌ಗೆ ವಿನ್ನರ್ ಪಟ್ಟ ಸಿಕ್ಕರೆ, ಗೌತಮ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಮೂಲತಃ ಮೈಸೂರಿನವರದ ನಿಖಿಲ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಮಿಂಚಿದ್ದರು. ನಂತರ ಕನ್ನಡದ 'ಊಟಿ' ಸಿನಿಮಾದಲ್ಲಿಯೂ ನಟಿಸಿದ್ದರು.