Amulya : ಬರ್ತ್ ಡೇ ದಿನ ಅವಳಿ ಮಕ್ಕಳ ಫೋಟೋ ಹಂಚಿಕೊಂಡ ನಟಿ ಅಮೂಲ್ಯ
ಕನ್ನಡ ಚಿತ್ರರಂಗದ ಖ್ಯಾತ ನಟಿ ಅಮೂಲ್ಯ ಅವರಿಗೆ ಇಂದು (ಸೆ.14) ಹುಟ್ಟುಹಬ್ಬದ ಸಂಭ್ರಮ. ಅನೇಕ ಜನರು ತಮ್ಮ ನೆಚ್ಚಿನ ನಟಿಯ ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ.
ಕುಟುಂಬದವರು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದಲೂ ಶುಭಾಶಯಗಳು ಬರುತ್ತಿವೆ.
ಜಗದೀಶ್ ಆರ್. ಚಂದ್ರ ಜೊತೆ ಮದುವೆ ಆದ ಬಳಿಕ ಅಮೂಲ್ಯ ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ.
ಈ ವರ್ಷ ಜೂನ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ ಅಮೂಲ್ಯ, ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ.
ಇದೀಗ ಅವರು ತಮ್ಮ ಇಬ್ಬರು ಅವಳಿ ಮಕ್ಕಳ ಫೋಟೋವನ್ನು ಹಂಚಿಕೊಂಡಿದ್ದು, ಸಖತ್ ಕ್ಯೂಟ್ ಆಗಿದೆ.