ಪ್ರಭಾವಿ ರಾಜಕಾರಣಿಯ ಅಳಿಯನೇ ನಟಿ ಮಂಜುಳಾ ಸಾವಿಗೆ ಕಾರಣವಾಗಿದ್ದಾ? ಆಕೆಯ ಮೈಗೆ ಬೆಂಕಿ ಹೊತ್ತಿದ್ದು ಹೀಗಾ!!
ನಟಿ ಮಂಜುಳಾ 1986 ಸೆಪ್ಟೆಂಬರ್ 12 ರಂದು ವಿಧಿವಶರಾದರು. ನಿಧನರಾಗುವ ಒಂದು ವಾರ ಮೊದಲು ಮೈಗೆ ಬೆಂಕಿ ತಗುಲಿ ಆಸ್ಪತ್ರೆ ಸೇರಿದ್ದರು. ಬೆಂಕಿಯಲ್ಲಿ ಬೆಂದು ಹೋಗಿದ್ದ ಮಂಜುಳಾ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮಂಜುಳಾ ಡಾ.ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ಶ್ರೀನಾಥ್ ಸೇರಿದಂತೆ ಮುಂತಾದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಅಂದು ಬಹುಬೇಡಿಕೆಯ ಸ್ಟಾರ್ ನಟಿ ಮಂಜುಳಾ.
ಕೇವಲ 32ನೇ ವಯಸ್ಸಿನಲ್ಲಿಯೇ ಮಂಜುಳಾ ಇಹಲೋಕ ತ್ಯಜಿಸಬೇಕಾಯಿತು. ನಟಿ ಮಂಜುಳಾ ಸಾವಿನ ರಹಸ್ಯ ಯಾರಿಗೂ ತಿಳಿಯಲೇ ಇಲ್ಲ.
ನಟಿ ಮಂಜುಳಾಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್ದ ಎಂಬ ವದಂತಿ ಇದೆ. ತಮಿಳುನಾಡಿನ ಎಂ ಕರುಣಾನಿಧಿ ಅವರ ಅಕ್ಕನ ಮಗ ಅಮೃತಂ ಜತೆ ನಟಿ ಮಂಜುಳಾ ಮದುವೆ ಆಗಿದ್ದರು ಎಂದು ಹಲವರು ಹೇಳುತ್ತಾರೆ. ಆದರೆ ಇದು ನಿಜವೋ ಸುಳ್ಳೋ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. (ಗಮನಿಸಿ:ಇದು ವದಂತಿಯಾಗಿದ್ದು, ಈ ವಿಚಾರದ ಸತ್ಯಾಸತ್ಯತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸಲ್ಲ.)
ಮದುವೆ ಜೀವನದಲ್ಲಿ ಗಂಡ-ಹೆಂಡತಿ ನಡುವೆ ಜಗಳ, ಭಿನ್ನಾಭಿಪ್ರಾಯ ಶುರುವಾಗಿತ್ತು. ಇದೇ ಕಾರಣಕ್ಕೆ ಅಮೃತಂ ಮಂಜುಳಾರನ್ನು ಬಿಟ್ಟು ಶಾಶ್ವತವಾಗಿ ಮದ್ರಾಸ್ ಸೇರಿಕೊಂಡಿದ್ದರು ಎಂಬ ಬಹು ದೊಡ್ಡ ವದಂತಿ ಇದೆ. (ಗಮನಿಸಿ:ಇದು ವದಂತಿಯಾಗಿದ್ದು, ಈ ವಿಚಾರದ ಸತ್ಯಾಸತ್ಯತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸಲ್ಲ.)
ಬಳಿಕ ನಟಿ ಮಂಜುಳಾ ಒಬ್ಬಂಟಿಯಾದರು. ಆ ನಂತರ ಚಾಮರಾಜನಗರದ ಹುಡುಗನೊಬ್ಬನ ಜೊತೆ ಪ್ರೇಮವಾಯಿತು. ಆದರೆ ಆತ ಮದುವೆಯಾಗಲು ನಿರಾಕರಿಸಿದ್ದ ಎಂದು ಹೇಳಲಾಗುತ್ತದೆ.
ಪ್ರೀತಿಸಿದವನ ಮೋಸದಿಂದ ಬೇಸತ್ತ ನಟಿ ಮಂಜುಳಾ ತಾವೇ ಗ್ಯಾಸ್ ಲೀಕ್ ಮಾಡಿ ಬೆಂಕಿ ಹೊತ್ತಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರು ಎನ್ನಲಾಗಿದೆ.
ಆದರೆ ಮಂಜುಳಾ ಮೈ ಬೆಂಕಿಯಲ್ಲಿ ಬೆಂದು ಹೋಯಿತು. ಅರ್ಧ ಜೀವವಾಗಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದರು. ಸಾವು ಬದುಕಿನ ಹೋರಾಟದಲ್ಲಿಒಂದು ವಾರ ನರಳಿ ಕೊನೆಗೆ ವಿಧಿವಶರಾದರು. ಮಂಜುಳಾ ಸಾವನ್ನಪ್ಪಿ ಇಂದಿಗೆ 40ಕ್ಕೂ ಹೆಚ್ಚು ವರ್ಷ ಕಳೆದಿವೆ.