Sandalwood: 50ನೇ ವಯಸ್ಸಿನಲ್ಲಿ ಮದುವೆ ಆಗಲಿದ್ದಾರಾ ಕನ್ನಡದ ಈ ಸ್ಟಾರ್ ನಟಿ!?
Nagma marriage Rumors: ಸ್ಯಾಂಡಲ್‌ವುಡ್‌ನ ಸಿನಿಮಾ ಪ್ರೇಕ್ಷಕರ ನಿದ್ದೆ ಕದ್ದಿದ್ದ 90 ರ ದಶಕದ ಈ ನಟಿ ಮೂರು ವಿವಾಹಿತ ನಟರೊಂದಿಗೆ ಡೇಟಿಂಗ್ ಮಾಡಿದ್ದಾರೆಂಬ ವದಂತಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಬಾಲಿವುಡ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್‌ವರೆಗೆ ಅನೇಕ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ.
ನಟಿ ನಗ್ಮಾ ಸೌತ್ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದವರು. ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿ ಉಳಿದಿದ್ದಾರೆ.
ಬಾಲಿವುಡ್‌ನಲ್ಲಿ ಕೆಲವು ಚಿತ್ರಗಳನ್ನು ಮಾಡಿದ ನಂತರ ದಕ್ಷಿಣಕ್ಕೆ ಬದು ಸೌತ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದರು. ನಂತರ ಭೋಜ್‌ಪುರಿ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು.
ನಗ್ಮಾ ಬಾಲಿವುಡ್, ಸೌತ್ ಸಿನಿರಂಗ ಮತ್ತು ಭೋಜ್‌ಪುರಿ ಸೇರಿದಂತೆ 81 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಗೆದ್ದರು.
ನಗ್ಮಾ ತಮ್ಮ ಸಿನಿಮಾಗಳಿಗೆ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲೂ ಸದಾ ಸುದ್ದಿಯಲ್ಲಿದ್ದರು.
ನಗ್ಮಾ 1974 ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಈಗ ಅವರಿಗೆ 50 ವರ್ಷ ವಯಸ್ಸು.
ನಗ್ಮಾ ಇನ್ನೂ ಮದುವೆಯಾಗಿಲ್ಲ. ರಾಜಕಾರಣಿಯಾಗಿರು ನಟಿ ನಗ್ಮಾ ಒಂಟಿ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಮತ್ತೆ ಅವರ ಮದುವೆ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ.