ನಟಿ ಸೌಂದರ್ಯ ಅವರ ಪತಿ ಯಾರು.. ಈಗ ಹೇಗಿದ್ದಾರೆ ಗೊತ್ತಾ?
ಹೆಸರಿಗೆ ತಕ್ಕಂತೆ ಸೌಂದರ್ಯ ಹೊಂದಿದ್ದ ನಟಿಯ ದುರಂತ ಸಾವು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಎಲ್ಲ ಭಾಷೆಯ ಸಿನಿಮಾಗಳಲ್ಲಿ ಸೌಂದರ್ಯ ನಟಿಸಿದ್ದರು.
ಆಗಿನ ಕಾಲದ ಸ್ಟಾರ್ ನಟಿಯರಲ್ಲಿ ಸೌಂದರ್ಯ ಅಗ್ರಸ್ಥಾನ ಪಡೆದಿದ್ದರು. ಆದರೆ ಕೇವಲ 31 ವರ್ಷಕ್ಕೆ ಇಹಲೋಕ ತ್ಯಜಿಸಿದರು.
ಬಾಲ್ಯ ಸ್ನೇಹಿತ ರಘು ಅವರನ್ನು ಸೌಂದರ್ಯ 2003ಲ್ಲಿ ಮದುವೆಯಾಗಿದ್ದರು.
2004ರಲ್ಲಿ ರಾಜಕೀಯ ಪ್ರಚಾರಕ್ಕೆಂದು ಹೊರಟಾಗ ಹೆಲಿಕಾಪ್ಟರ್ ಅಪಘಾತದಲ್ಲಿ ಸೌಂದರ್ಯ ಸಾವಿಗೀಡಾದರು. ಸೌಂದರ್ಯ ಸಾವನ್ನಪ್ಪಿದಾಗ ರಘು ಅವರ ಜೊತೆ ಮದುವೆಯಾಗಿ ವರ್ಷವೂ ತುಂಬಿರಲಿಲ್ಲ.
ಸೌಂದರ್ಯ ಅಗಲಿಕೆ ನಂತರ ರಘು ಪತ್ನಿಯ ನೆನಪಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸೌಂದರ್ಯ ಹೆಸರಲ್ಲಿ ಶಾಲೆ ನಡೆಸುತ್ತಿದ್ದಾರೆ, ಸಮಾಜಸೇವೆಯನ್ನೂ ಮಾಡಿದರು.
ಸೌಂದರ್ಯ ಪತಿ ರಘು ಅವರು ಗೋವಾ ಮೂಲದ ಡಾಕ್ಟರ್ ಅರ್ಪಿತಾ ಅವರನ್ನು ಎರಡನೇ ಮದುವೆ ಆಗಿದ್ದು, ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.