`ಭಗವಂತ್‌ ಕೇಸರಿ` ಖ್ಯಾತಿಯ ಶ್ರೀಲೀಲಾಳ ಮುದ್ದಾದ ಫೋಟೋ ಶೂಟ್‌

Sat, 28 Oct 2023-5:32 pm,

ಸೌತ್‌ಇಂಡಿಯನ್‌ ಸ್ಟಾರ್‌ ಬೆಡಗಿ ನಟಿ ಶ್ರೀಲೀಲಾ ಇತ್ತೀಚೆಗೆ ಫೋಟೋ ಶೋಟ್‌ ಮಾಡಿಸಿದ್ದಾರೆ. ಈ ನಟಿ ತೆಗೆಸಿಕೊಂಡಿರುವ ಫೋಟೋಗಳಲ್ಲಿ ಈಕೆ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. 

ನಟಿ ಶ್ರೀಲೀಲಾ ಕಪ್ಪು ಬಣ್ಣದ ಪ್ರಾಕ್‌ನಲ್ಲಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಆಕೆ ಧರಿಸಿರುವ ಫ್ರಾಕ್‌ಮೇಲೆ  ರೇನ್‌ಬೋ ಡಿಸೈನ್‌ ಹಾಗೂ ಒಂದು ಸ್ಟಾರ್‌ ಹೊಂದಿದೆ. ಹಾಗೆ ಅದರ ಮೇಲೆ ರೋಸ್‌ ಪಿಂಕ್‌  ಮತ್ತು ಬಿಳಿ ಬಣ್ನದ ಪ್ರಿಂಟೆಡ್‌ ಡಿಸೈನ್‌ ಸಹ ಮಾಡಿದ್ದಾರೆ.

ಈ ನಟಿ ಪೋಟೋ ಶೂಟ್‌ ಮಾಡಿಸುವಾಗ ವಿಭಿನ್ನ ಪೋಸ್‌ಗಳನ್ನು ನೀಡುವುದರ ಮೂಲಕ ಎಲ್ಲರ ಗಮನ ಸಳೆದಿದ್ದಾರೆ. ಈಕೆ ತನ್ನ ಎಡಗೈಗೆ ಸಿಲ್ವರ್‌ ಬಣ್ಣದ ಬ್ರಾಸ್ಲೈಟ್‌ ಧರಿಸಿ, ಕಿವಿಗೆ ಕಪ್ಪು ಬಣ್ಣದ ಪ್ರೆಸಿಂಗ್ಸ್‌ ಹಾಕಿಕೊಂಡಿದ್ದಾರೆ.

ಈ ಎಲ್ಲಾ ಫೋಟೋಗಳನ್ನು ನಟಿ ಕಿಸ್‌ ಸುಂದರಿ ಶ್ರೀಲೀಲಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡುವುದರ ಜೊತೆ," ಜೀವನವನ್ನು ಉತ್ತಮವಾಗಿ ಸಾಗಿಸಬೇಕು" ಎಂದು ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ.

ನಟಿ ಶ್ರೀಲೀಲಾ ಎ.ಪಿ. ಅರ್ಜುನ್‌ ನಿರ್ದೇಶನದ ಕಿಸ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಕಿಸ್‌ ಚಿತ್ರದಲ್ಲೇ ನಾಯಕ ವಿರಾಟ್‌ ಜೊತೆ ನಾಯಕಿಯಾಗಿ ನಟಿಸಿದ್ದರು.

ಶ್ರೀಲೀಲಾ ಸ್ಯಾಂಡಲ್‌ವುಡ್‌ ಸಿನಿಮಾಗಳಿಗಿಂತ ಹೆಚ್ಚಾಗಿ ಟಾಲಿವುಡ್‌ ಚಿತ್ರಗಳಲ್ಲಿ ಹೆಚ್ಚಾಗಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಈಕೆ ಮೂರು ಬಾರಿ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈಕೆ ಜನಿಸಿದ್ದು ಅಮೇರಿಕಾದಲ್ಲಿ ಆದರೂ, ತಮ್ಮ ಜೀವನವನ್ನು ಭಾರತದಲ್ಲಿ ಕಟ್ಟಿಕೊಂಡಿದ್ದಾರೆ. ಈಕೆ ನಟಿ ಮಾತ್ರವಲ್ಲದೆ ಭರತನಾಟ್ಯಂ ಡಾನ್ಸರ್‌ ಸಹ. ಇವರು ಕೊನೆಯ ವರ್ಷ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link