Tanisha Kuppanda: ಖಡಕ್‌ ಪೋಲೀಸ್‌ ಗೆಟಪ್‌ನಲ್ಲಿ ಬಿಗ್‌ ಬಾಸ್‌ ಬೆಂಕಿ: ಸಡನ್‌ ಶಾಕ್‌ ಕೊಟ್ಟ ತನಿಷಾ!

Sat, 16 Mar 2024-6:48 pm,

ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟಿ, ಬಿಗ್‌ಬಾಸ್‌ ಖ್ಯಾತಿಯ ಬೆಂಕಿ ತನಿಷಾ ಕುಪ್ಪಂಡ ಇತ್ತೀಚೆಗೆ ಖಡಕ್ ಪೊಲೀಸ್ ಆಫೀಸರ್ ಅವತಾರದಲ್ಲಿ ಕಾಣಿಸಕೊಂಡು ಅಚ್ಚರಿ ಮೂಡಿಸಿದ್ದಾರೆ.

 ನಟಿ ತನಿಷಾ ಕುಪ್ಪಂಡ ಪೋಲೀಸ್‌ ಗೆಟಪ್‌ನಲ್ಲಿ ಅಂದವಾಗಿ ಪೋನಿಟೈಲ್ ಹಾಕಿಕೊಂಡು, ನಾರ್ಮಲ್‌ ಮೇಕಪ್‌ನಲ್ಲಿ ಮತ್ತು ಕೈಯಲ್ಲಿ ವಾಟರ್‌ ಬಾಟೆಲ್‌ ಹಿಡಿದು ಆಕರ್ಷವಾಗಿ ಕಾಣಿಸಿಕೊಂಡಿದ್ದಾರೆ.

ತನಿಷಾ ಕುಪ್ಪಂಡ ಸದಾ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿ ಈ ಫೋಟೋಗಳನ್ನು ಕೂಡ ಅಭಿಮಾನಿಗಳ ಜೊತೆಗೆ ಶೇರ್‌ ಮಾಡಿದ್ದಾರೆ. ಈ ಫೋಟೋಗಳಿಗೆ ಸಾವಿರಾರು ಲೈಕ್ಸ್‌ ಬರುವುದರ ಜೊತೆಗೆ ನೆಟ್ಟಿಗರು ಕಾಮೆಂಟ್‌ ಮೇಲೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.  

ತನಿಷಾ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದರ ಜೊತೆಗೆ ಇದನ್ನು ನೋಡಿದ ಫ್ಯಾನ್ಸ್‌  ನೀವು ಲೇಡಿ ಸಿಂಗಂ, ಸೂಪರ್ ಬೆಂಕಿ ತನಿಷಾ, ಬೇಸಿಗೆಯಲ್ಲಿ ಬಿಸಿಲನ್ನೇ ತಡೆಯೋಕಾಗ್ತಿಲ್ಲ, ಬೆಂಕಿ ಬೇರೆ ಬಂತಾ ಅಂತೆಲ್ಲಾ ಕಾಮೆಂಟ್‌ಗಳಲ್ಲಿ ಹೊಗಳಿದ್ದಾರೆ.

ಸೀರಿಯಲ್‌ ನಟಿ ತನಿಷಾ ಕನ್ನಡತಿ ಧಾರವಾಹಿಯ ಹೀರೋ ಕಿರಣ್ ರಾಜ್ ಅಭಿನಯದ ‘ಶೇರ್’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಬಗ್ಗೆ  ಸ್ವತಃ ತನಿಷಾ ಅಪ್‌ಡೇಟ್ ನೀಡಿದ್ದಾರೆ.

ಕನ್ನಡದ ನಟಿ ತನಿಷಾ ತಮ್ಮ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡುವುದರೊಂದಿಗೆ ಕ್ಯಾಪ್ಶನ್‌ನಲ್ಲಿ ʻನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆʼ ಎಂದು ಬರೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link