ಅಂದು ಚಾಕ್ಲೇಟ್‌ ರ್ಯಾಪರ್ ಕಟ್ಟಿ ಹಣ ಸಂಪಾದಿಸ್ತಿದ್ದವರು ಇಂದು ಕನ್ನಡದ ಸ್ಟಾರ್‌ ನಟಿ... ನಂಬರ್ 1 ನಿರೂಪಕಿ​! ಯಾರು ಗೊತ್ತಾಯ್ತಾ?

Sun, 28 Jul 2024-4:21 pm,

ಕನ್ನಡದಲ್ಲಿ ನಿರೂಪಣೆ ಎಂದಾಕ್ಷಣ ಕಣ್ಣಮುಂದೆ ಮೂಡುವ ಚಿತ್ರಣ ಒಂದೇ... ಅದು ಅನುಶ್ರೀ. ಚಟಪಟ ಮಾತಿನಿಂದಲೇ ಪ್ರೇಕ್ಷಕರ ಮನಗೆದ್ದ ಚೆಲುವೆ, ಈ ಸಾಧನಾ ಶಿಖರದವರೆಗೆ ನಡೆದುಬಂದ ಹಾದಿ ಸುಲಭದ್ದೇನಲ್ಲ.

ಬಾಲ್ಯದಿಂದಲೇ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಈ ನಟಿ, ಒಂದೊಮ್ಮೆ ಚಾಕಲೇಟ್‌ ರ್ಯಾಪರ್‌ ಕಟ್ಟಿ ಹಣ ಸಂಪಾದಿಸುತ್ತಿದ್ದರಂತೆ.

 

ಅಷ್ಟೇ ಅಲ್ಲದೆ, ಮಂಗಳೂರಿನಲ್ಲಿರುವ ಟಾಟಾ ಏಜಿ ಲೈಫ್​​ ಇನ್ಶೂರೆನ್ಸ್​ ಕಂಪನಿಯಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡಿದ್ದರಂತೆ.

 

ಅಂದಹಾಗೆ ಈ ಎಲ್ಲಾ ವಿಚಾರಗಳ ಬಗ್ಗೆ ಸ್ವತಃ ಅನುಶ್ರೀಯವರೇ ಹೇಳಿಕೊಂಡಿದ್ದಾರೆ.

 

ದಿ ಪವರ್ ​ಹೌಸ್​ ವೈನ್ಸ್​ ಎಂಬ ಯೂಟ್ಯೂಬ್​ ಚಾನೆಲ್​ʼನಲ್ಲಿ ಅನುಶ್ರೀ ಇಂಟರ್​ವ್ಯೂವ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಬಾಲ್ಯ, ಪಟ್ಟ ಕಷ್ಟ, ಅನುಭವಿಸುತ್ತಿರುವ ಸಂತಸದ ಬದುಕಿನ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

 

ಕುಟುಂಬ ನಿರ್ವಹಣೆಗೆ ಹೊಣೆ ಹೊತ್ತಿದ್ದ ಅನುಶ್ರೀ, ಅನೇಕ ಕಡೆ ಕೆಲಸಗಳನ್ನು ಮಾಡಿದ್ದಾರೆ. ಅದಾದ ಬಳಿಕ ನಿರೂಪಣಾ ವೃತ್ತಿಗೆ ಬಂದಿದ್ದಾರೆ. ಈ ಎಲ್ಲದರ ಬಗ್ಗೆ ಸಂದರ್ಶನದಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link