BBK 10: ‘ಬಿಗ್ ಬಾಸ್’ ವಿನ್ನರ್ ಇವರೇ.. ಕೋಟಿ ಕೊಟ್ರು ಹೋಗಲ್ಲ ಎಂದು 50 ಲಕ್ಷ ಗೆದ್ದೇ ಬಿಟ್ರಾ! ಫಿನಾಲೆಗೆ ಒಂದು ದಿನ ಮುನ್ನವೇ ಹೆಸರು ಲೀಕ್ ಆಯ್ತಾ!!
ಬಿಗ್ ಬಾಸ್ ಕನ್ನಡ 10 ಗ್ರ್ಯಾಂಡ್ ಫಿನಾಲೆ ಜನವರಿ 27 ಹಾಗೂ 28 ರಂದು ನಡೆಯಲಿದೆ. ಈ ಬಾರಿ ವಿನ್ನರ್ ಆಗೋದು ಯಾರು ಎಂಬ ಚರ್ಚೆ ಜೋರಾಗಿದೆ.
ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 6 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಟಾಪ್ 6 ಸ್ಪರ್ಧಿಗಳ ಪೈಕಿ ಯಾರು ವಿನ್ನರ್ ಆಗಲಿದ್ದಾರೆ ಎಂಬುದು ಜನವರಿ 28ರ ರಾತ್ರಿ ಕನ್ಫರ್ಮ್ ಆಗಲಿದೆ.
ಕಾರ್ತಿಕ್, ವಿನಯ್, ಸಂಗೀತಾ, ಡ್ರೋನ್ ಪ್ರತಾಪ್, ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ಆರು ಮಂದಿ ಫೈನಲಿಸ್ಟ್ ಗಳಿದ್ದಾರೆ. ಈ ಪೈಕಿ ಏಕೈಕ ಮಹಿಳಾ ಫೈನಲಿಸ್ಟ್ ನಟಿ ಸಂಗೀತಾ ಶೃಂಗೇರಿ.
ಬಿಗ್ ಬಾಸ್ ಕನ್ನಡ 10 ಫಿನಾಲೆಗೆ ಒಂದು ದಿನ ಮುಂಚಿತವಾಗಿ BBK10 ವಿನ್ನರ್ ಹೆಸರು ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಬಾರಿ ಬಿಗ್ ಬಾಸ್ ಕನ್ನಡ 10 ರ ವಿನ್ನರ್ ಮಹಿಳಾ ಕಂಟೆಸ್ಟಂಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಎರಡನೇ ಬಾರಿ ಮಹಿಳೆಯೊಬ್ಬರು ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸಿಂಹಿಣಿ ಎಂದೇ ಕರೆಸಿಕೊಳ್ಳುವ ಸಂಗೀತಾ ಈ ಬಾರಿ ಗೆಲ್ಲಬಹುದು ಎಂಬುದು ಹಲವರ ವಾದವಾಗಿದೆ. ಎರಡನೇ ಮಹಿಳಾ ವಿನ್ನರ್ ಆಗಿ ಸಂಗೀತಾ ಶೃಂಗೇರಿ ಹೊಸ ಇತಿಹಾಸ ಸೃಷ್ಟಿಸ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.