ಶೀಘ್ರದಲ್ಲೇ ಕನ್ನಡ ಬಿಗ್‌ಬಾಸ್ ಸೀಸನ್ 11 ಆರಂಭ.. ಕಂಟಸ್ಟಂಟ್ ಲಿಸ್ಟ್‌ನಲ್ಲಿದ್ದಾರೆ ಈ ಖ್ಯಾತ ಸಿರೀಯಲ್ ನಟಿ!
ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಒಂದಾಗಿರುವ ಬಿಗ್‌ಬಾಸ್ 11ನೇ ಸೀಸನ್ ಇದೇ ಇದೇ ಅಕ್ಟೋಬರ್ ನಿಂದ ಆರಂಭವಾಗಲಿದೆ ಎನ್ನಲಾಗ್ತಿದೆ.. ಅದಲ್ಲದೇ ಭರ್ಜರಿ ತಯಾರಿ ಕೂಡ ನಡೆದಿದೆ..
ದೊಡ್ಮನೆಗೆ ಹೊಸ ಬಣ್ಣ ನೀಡುವ ಕೆಲಸವೂ ಸಾಗುತ್ತಿದೆ ಎಂದು ಹೇಳಲಾಗಿದೆ.. ಇದರ ಜೊತೆಗೆ ಈ ಬಾರಿ ಬಿಗ್‌ಮನೆಗೆ ಯಾರೆಲ್ಲ ಬರಬಹುದು ಎನ್ನುವುದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಿದೆ.. ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ಶುರುವಾಗಿದೆ..
ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಹಾಗೇ 'ಲವ್ ಗುರು' ಖ್ಯಾತಿಯ ತರುಣ್ ಚಂದ್ರ, ಸಿಂಗರ್ ಆಶಾ ಭಟ್, ನಟಿ ರೇಖಾ, ರೀಲ್ ಸ್ಟಾರ್ ಭೂಮಿಕಾ ಬಸವರಾಜ್ ಬರುತ್ತಾರೆ ಎಂದು ಹೇಳಲಾಗುತ್ತಿದೆ..
ಇದರೊದಿಗೆ ಸಿನಿಮಾ ನಟ ಎಸ್ ನಾರಾಯಣ ಅವರ ಮಗ ಪಂಕಜ್, ಅಂತಪಟ ಸಿರೀಯಲ್ ನಟಿ ತನ್ವಿಯಾ, ಕೆಂಡಸಂಪಿಗೆ ಸೀರೀಯಲ್ ಆಕಾಶ್, ಶನಿ ಖ್ಯಾತಿಯ ಸುನೀಲ್ ಬರಬಹುದು ಎಂದು ಊಹಿಸಲಾಗಿದೆ..
ಇಷ್ಟೇ ಅಲ್ಲ.. ರೀಲ್ಸ್ ಸ್ಟಾರ್ ರೇಷ್ಮಾ, ತುಕಾಲಿ ಸಂತು ಪತ್ನಿ, ವರುಣ್ ಆರಾಧ್ಯ ಸೇರಿದಂತೆ ಹಲವರಿಗೆ ಬಿಗ್‌ಬಾಸ್ ನಿಂದ ಕರೆಮಾಡಲಾಗಿದೆ ಎಂದು ಹೇಳಾಗುತ್ತಿದೆ..
ಸದ್ಯ ಪ್ರತಿಬಾರಿಯಂತೆ ಬಿಗ್‌ಬಾಸ್ 11ನ್ನು ಅಕ್ಟೋಬರ್‌ನಲ್ಲಿ ಆರಂಭಿಸುವ ಎಲ್ಲ ತಯಾರಿಗಳು ನಡೆದಿವೆ ಎನ್ನಲಾಗಿದೆ.. ಈ ಸಂಬಂಧ ಬಿಗ್‌ಬಾಸ್ ಹೋಸ್ಟ್ ಜವಾಬ್ದಾರಿಯನ್ನು ಈ ಬಾರಿಯೂ ಕಿಚ್ಚ ಸುದೀಪ್ ಹೊತ್ತಿದ್ದಾರೆ.