ಮೊದಲ ಪತಿಯಿದ ಮೋಸ.. ಎರಡನೆ ಮದುವೆಗೆ ರೆಡಿಯಾದ ಕನ್ನಡದ ಖ್ಯಾತ ನಿರೂಪಕಿ!
)
Anchor Marriage: ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಒಬ್ಬರಾಗಿರುವ ಚೈತ್ರಾ ವಾಸುದೇವನ್ ಅವರು ಎರಡನೇ ಮದುವೆಗೆ ಸಜ್ಜಾಗಿದ್ದಾರೆ, ಈ ವಿಶಯವನ್ನು ತಾವೇ ಇದೀಗ ತಮ್ಮ ಸಾಮಾಜಿಕ ಜಾಲತಾNದಲ್ಲಿ ಹಂಚಿಕೊಂಡಿದ್ದು, ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
)
ಬಿಗ್‌ಬಾಸ್ ಸೀಸನ್ 7ರ ಸ್ಪರ್ದೀಯಾಗಿ ಅಷ್ಟೇ ಅಲ್ಲದೆ, ನಿರೂಪಕಿಯಾಗಿ ಕರುನಾಡ ಜನರ ಮನ ಕದ್ದಿರುವ ಚೈತ್ರಾ ವಾಸುದೇವನ್ ಅವರು 2023 ರಲ್ಲಿ ವಿಚ್ಛೇದನ ಪಡೆದು ತಮ್ಮ ಮೊದಲನೆ ಪತಿಯಿಂದ ದೂರವಾಗಿದ್ದರು.
)
ಇದೀಗ ವಿಚ್ಛೇದನವಾದ ಎರಡು ವರ್ಷದ ನಂತರ ಚೈತ್ರಾ ಇದೀಗ ಎರಡನೆ ಮದುವೆಗೆ ಸಜ್ಜಾಗಿದ್ದಾರೆ. ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು " ನಾನು ನಿಮ್ಮೊಂದಿಗೆ ಒಂದು ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇನೆ. 2025ರಲ್ಲಿ ನಾನು ಹೊಸ ಜೀವನಕ್ಕೆ ಕಾಲಿಡಲು ಮುಂದಾಗಿದ್ದೇನೆ, ಇದು ನನ್ನ ಮದುವೆಯ ಸುಂದರವಾದ ಹೊಸ ಪಯಣ, ನಿಮ್ಮೆಲ್ಲರ ಆಶಿರ್ವಾದ ಹಾಗೂ ಬೆಂಬಲ ನನ್ನ ಮೇಲಿರಲಿ" ಎಂದು ಚೈತ್ರಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಚೈತ್ರಾ ವಾಸುದೇವನ್ ಅವರು ತಾವು ಮದುವೆಯಾಗುತ್ತಿರುವ ಯಾರು ಎಂಬುದನ್ನು ಹೇಳಿಕೊಂಡಿಲ್ಲ, ಹುಡುಗ ಏನು ಕೆಲಸ ಮಾಡುತ್ತಿದ್ದಾನೆ ಎಂಬ ಗುಟ್ಟನ್ನು ಸಹ ಬಿಚ್ಚಿಟ್ಟಿಲ್ಲ, ಆದರೆ ಚೈತ್ರಾ ಅವರು ಮರು ಮದುವೆಗೆ ರೆಡಿಯಾಗಿರುವುದನ್ನು ನೋಡಿ ಜನರು ಶುಭ ಹಾರೈಸುತ್ತಿದ್ದಾರೆ.
ಹತ್ತು ದಿನಗಳ ಹಿಂದೆಯಷ್ಟೆ ಚೈತ್ರಾ ವಾಸುದೇವನ್ ಅವರು ತಾವು ಮದುವೆಯಾಗುತ್ತಿರುವ ಹುಡುಗನ ಜೊತೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಪ್ಯಾರಿಸ್‌ನಲ್ಲಿ ಮಾಡಿಸಿಕೊಂಡ ಫೋಟೋಶೂಟ್‌ನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಚೈತ್ರಾ ಇದೀಗ ತಾವು ಶೀಗ್ರವೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನೂ, ಮೊದಲನೆಯ ಮದುವೆಯ ಬಗ್ಗೆ ಹೇಲುವುದಾದರೆ, ನಿರೂಪಕಿ ಚ್ತ್ರಾ ಡಿಗ್ರಿ ಮುಗಿಯುತ್ತಿದ್ದಂತೆ ಮದುವೆ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐದು ವರ್ಷದ ದಾಂಪತ್ಯ ಜೀವನ ನಡೆಸಿದ ನಂತರ ಪತಯಿಂದ ವಿಚ್ಛೇದನ ಪಡೆದು ಚೈತ್ರಾ ದೂರವಾಗಿದ್ದರು.
" ಡಿಗ್ರಿ ಮುಗಿಸಿದ ಕೂಡಲೆ ನನ್ನ ಮದುವೆಯಾಗಿತ್ತು, ಮನೆಯವರು ನೋಡಿದ ಹುಡುಗನ ಜೊತೆ ನನ್ನ ಮದುವೆ ನಡೆದಿತ್ತು, ಆದರೆ ನನ್ನ ಮತಿಯಿಂದಲೇ ನನಗೆ ಮೋಸ ಆಗುತ್ತೆ, ನನ್ನ ಜೀವನ ಹೀಗೆ ಆಗುತ್ತೆ ಎಂಬ ಸಣ್ಣ ಊಹೆ ಸಹ ನನಗೆ ಇರಲಿಲ್ಲ, ನನ್ನ ಜೀವನ ಹೀಗಾಯ್ತಲ್ಲಾ ಅಂತಾ ನನ್ನ ತಂದೆ ತಾಯಿ ಕೂಡ ತುಂಬಾ ಕುಗ್ಗಿ ಹೋಗಿದ್ದರು" ಎಂದು ಚೈತ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.