Kannada Movies: ಶುಕ್ರವಾರ ಬೆಳ್ಳಿತೆರೆಯ ಮೇಲೆ ಹೊಸ ಐದು ಕನ್ನಡ ಸಿನಿಮಾಗಳ ಅಬ್ಬರ!

Wed, 03 Apr 2024-12:08 pm,

 ಮಾರಿಗೋಲ್ಡ್:- ದೂದ್ ಪೇಡ ದಿಗಂತ್ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಅಭಿನಯದ ಮಾರಿಗೋಲ್ಡ್ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಮಾರಿ ಮತ್ತು ಗೋಲ್ಡ್ ಎರಡೂ ಸೇರಿ ಚಿನ್ನದ ಕಥೆಯನ್ನು ಹೊತ್ತು ಬರ್ತಿದ್ದು, ಈ ಸಿನಿಮಾದಲ್ಲಿ ನಟ ದಿಗಂತ್‌ ಹೊಸ ರಗಡ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭರ್ಜರಿ ಗಂಡು:- ಕನ್ನಡ ಕಿರುತೆರೆಯ ಖ್ಯಾತ ನಟ ಕಿರಣ್‌ ರಾಜ್‌ ಅಭಿನಯದ ಭರ್ಜರಿ ಗಂಡು ಸಿನಿಮಾ ಕೂಡ ರಿಲೀಸ್‌ ಆಗಲಿದೆ. ಈ ಚಿತ್ರವನ್ನು ಡೈರೆಕ್ಟರ್‌ ಪ್ರಸಿದ್ಧ್  ಆಕ್ಷನ್‌ ಕಟ್‌ ಹೇಳಿದ್ದು, ಇದರಲ್ಲಿ ಕಿರಣ್ ರಾಜ್‌ಗೆ ಜೋಡಿಯಾಗಿ ಯಶಾ ಶಿವಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ರಮೇಶ್ ಭಟ್, ವೀಣಾ ಸುಂದರ್, ಮಡೆನೂರು ಮನು, ಗೋವಿಂದೇ ಗೌಡ ಹೀಗೆ ಇನ್ನು ಅನೇಕರು ಇದ್ದಾರೆ.  

ಅವತಾರ ಪುರುಷ-2:- ಹಾಸ್ಯನಟ ಶರಣ್‌ ನಟನೆಯ ಅವತಾರ ಪುರುಷ-2 ಸಿನಿಮಾದಲ್ಲಿ ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರ ಮಾಟ-ಮಂತ್ರದ ಕಥೆಯಾಗಿದ್ದು ಇದರಲ್ಲಿ ದುಷ್ಟ ಶಕ್ತಿಗಳ ಚಿತ್ರಣವಿದೆ. ಡೈರೆಕ್ಟರ್‌ ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರದಲ್ಲಿ  ಮೊದಲ ಭಾಗದ ಆ ಒಂದು ಕಥೆಯನ್ನೇ ಮುಂದುವರೆಸಿದ್ದಾರೆ. ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್  ಹೀರೋಯಿನ್ ಆಗಿದ್ದು, ಇನ್ನೂ ಸಾಯಿ ಕುಮಾರ್, ಭವ್ಯ, ಬಿ.ಸುರೇಶ್ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ.  

ಮ್ಯಾಟ್ನಿ:- ಕನ್ನಡದ ನಟ ಸತೀಶ್ ನೀನಾಸಂ, ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಹಾರರ್‌  ಜಾನರ್‌ ಮ್ಯಾಟ್ನಿ ಸಿನಿಮಾ ಇದೇ ವಾರ ತೆರೆ ಮೇಲೆ ಬರಲಿದೆ. ಈ ಸಿನಿಮಾಎ ನಿರ್ದೇಶಕ ಮನೋಹರ್ ಕಂಪ್ಲಿ ಆಕ್ಷನ್‌ ಕಟ್‌ ಹೇಳಿದ್ದಾರೆ.

 ದಿ ಡಾರ್ಕ್‌ ವೆಬ್‌:- ಇದೇ ವಾರ ದಿ ಡಾರ್ಕ್‌ ವೆಬ್‌ ಎಂಬ ಹೊಸ ಪ್ರತಿಭೆಗಳ ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ. ಇದೊಂದು ಸಸ್ಪೆನ್ಸ್‌ ಕ್ರೈಂ ಥ್ರಿಲರ್‌ ಸಿನಿಮಾವಾಗಿದ್ದು, ಇದರಲ್ಲಿ ಚೇತನ್‌ ಕುಮಾರ್‌, ಮೇಘನಾ, ನಾಗರಾಜ್‌ ದೊಡ್ಡಮನಿ, ಗೌತಮ್‌ ಚಂದ್ರ ಮುಂತಾದವರೂ ಬಣ್ಣ ಹಚ್ಚಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link