ಭಾಗ್ಯಲಕ್ಷ್ಮೀ ಸೀರಿಯಲ್‌ ಶ್ರೇಷ್ಠಾ ತಾಯಿಯ ನಿಜವಾದ ಹೆಸರೇನು.. ಇವರ ಪತಿ ಮಕ್ಕಳು ಯಾರು ಗೊತ್ತೇ !

Mon, 13 May 2024-1:47 pm,

ಇವರ ನಿಜವಾದ ಹೆಸರು ಮಧುಮತಿ. ಕನ್ನಡತಿ ಧಾರಾವಾಹಿಯ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸೆಳೆದಿದ್ದಾರೆ. 

ನಟಿ ಮಧುಮತಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಸದ್ಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಶ್ರೇಷ್ಠಾ ಪಾತ್ರದ ತಾಯಿ ಯಶೋಧ ಕ್ಯಾರೆಕ್ಟರ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ. 

ನಾಟಕಗಳಲ್ಲಿ ನಟಿಸುತ್ತಿದ್ದ ನಟಿ ಮಧುಮತಿ ಮದುವೆ ಬಳಿಕ ಶಾಲಾ ಶಿಕ್ಷಕಿಯಾಗಿದ್ದರು. ಶಾಲೆಯ ಕೆಲಸ ಬಿಟ್ಟ ನಂತರ ನಟನೆಗೆ ಹಿಂದಿರುಗಿದರು. ಜೀವ ಹೂವಾಗಿದೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.

ಉದಯ ಟಿವಿಯ ಸುಂದರಿ, ಕಲರ್ಸ್‌ ವಾಹಿನಿಯ ಕನ್ನಡತಿ, ದೊರೆಸಾನಿ, ಭಾಗ್ಯಲಕ್ಷ್ಮೀ ಹೀಗೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಟಿ ಮಧುಮತಿ, ಮೈನಸ್ 18 ಪ್ಲಸ್ ಎನ್ನುವ ವೆಬ್‌ ಸೀರೀಸ್‌ ನಲ್ಲಿ ಸಹ ಆಕ್ಟ್‌ ಮಾಡಿದ್ದಾರೆ. 

ನಟಿ ಮಧುಮತಿ ಅವರ ಪತಿ ಸಂಜಯ್ ಕುಮಾರ್. ಇವರು ಖಾಸಗಿ ಬ್ಯಾಂಕ್ ಉದ್ಯೋಗಿ. ಮಧುಮತಿ ಅವರ  ಮಗಳು ಕೃತಿ ಮತ್ತು ಮಗ ಕೌಸ್ತುಭ್. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link