Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್ ನಟಿ!
ನಟಿ ಪವಿತ್ರಾ ಲೋಕೇಶ್ ಒಂದು ಸಮಯದಲ್ಲಿ ಹಾಟ್ ಟಾಪಿಕ್ ಆಗಿದ್ದರು. ನಟ ನರೇಶ್ ಅವರ ಜೊತೆಗಿನ ಸಂಬಂಧದಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
ಪವಿತ್ರಾ ಲೋಕೇಶ್ ಕನ್ನಡದಲ್ಲಿ ಕಿರುತೆರೆ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವೇ ಕೆಲವು ಚಿತ್ರಗಳಿಗೆ ನಾಯಕಿಯಾಗಿದ್ದು, ಪೋಷಕ ಪಾತ್ರಗಳೊಂದಿಗೆ ಪ್ರಸಿದ್ಧರಾದರು.
ಪವಿತ್ರಾ ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ರಂಗಭೂಮಿ ಮತ್ತು ಖ್ಯಾತ ಸಿನಿಮಾ ನಟರಾಗಿದ್ದ ಮೈಸೂರು ಲೋಕೇಶ್ ಅವರ ಮಗಳು ಪವಿತ್ರಾ. 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಪವಿತ್ರಾ ಲೋಕೇಶ್ ಅವರಿಗೆ ಈಗ 45 ವರ್ಷ ವಯಸ್ಸು. ಕನ್ನಡದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪವಿತ್ರಾ ಲೋಕೇಶ್ ನಟಿಸಿ ಖ್ಯಾತಿ ಪಡೆದಿದ್ದಾರೆ. 2006 ರ 'ನಾಯಿ ನೆರಳು' ಚಿತ್ರದಲ್ಲಿ ಪವಿತ್ರಾ ಲೋಕೇಶ್ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ.
ಪವಿತ್ರಾ ಲೋಕೇಶ್ ಮೊದಲ ಪತಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು ಎನ್ನಲಾಗುತ್ತದೆ. ಕುಟುಂಬದಲ್ಲಿನ ಕೆಲವು ಸಮಸ್ಯೆಯಿಂದಾಗಿ ವಿಚ್ಛೇದನ ಪಡೆದರು ಎನ್ನಲಾಗಿದೆ.
ಪವಿತ್ರಾ ಲೋಕೇಶ್ ಅವರ ಎರಡನೇ ಪತಿ ಸುಚೀಂದ್ರ ಪ್ರಸಾದ್. ಇವರು ಕೂಡ ಕನ್ನಡ ಪ್ರಖ್ಯಾತ, ಪ್ರತಿಭಾನ್ವಿತ ನಟ. ಸುಚೀಂದ್ರ ಪ್ರಸಾದ್ ಅವರಿಂದ 2018 ರಿಂದ ಪವಿತ್ರಾ ದೂರವಾದರು ಎನ್ನಲಾಗುತ್ತದೆ.
ಬಳಿಕ ಪವಿತ್ರಾ ಲೋಕೇಶ್ ಹಿರಿಯ ನಟ ನರೇಶ್‌ಗೆ ಆಪ್ತರಾದರು. ನರೇಶ್ ಟಾಲಿವುಡ್ ಫೇಮಸ್ ನಟ. ನರೇಶ್ ಅವರಿಗೂ ಈಗಾಗಲೇ ಮದುವೆಯಾಗಿದ್ದು ಪವಿತ್ರಾ ಜೊತೆಗಿನ ಸಂಬಂಧದ ವಿಚಾರ ತಿಳಿದಾಗ ಅವರ ಪತ್ನಿ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿದ್ದರು.
ಆದರೆ ನರೇಶ್ ಜೊತೆ ಪವಿತ್ರಾ ಮೂರನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಿಡಿಯೋ ಕೂಡ ವೈರಲ್ ಆಗಿತ್ತು. ನಟ ನರೇಶ್ 6000 ಕೋಟಿ ಆಸ್ತಿಯ ಒಡೆಯನಾಗಿದ್ದಾರೆ ಎನ್ನಲಾಗುತ್ತದೆ.