ಬಾಲಿವುಡ್ ಬೆಡಗಿ ವಿದ್ಯಾಬಾಲನ್ ತಂಗಿ ಕನ್ನಡದ ಈ ಸ್ಟಾರ್ ನಟಿ !ಮುಚ್ಚಿಟ್ಟಿದ್ದ ಸತ್ಯ ನಟಿಯ ಬಾಯಿಯಿಂದಲೇ ಬಯಲು !
)
ವಿದ್ಯಾ ಬಾಲನ್ ಅವರ ಈ ಸಹೋದರಿ ಪ್ರಸ್ತುತ ಸೌತ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ಕನ್ನಡದ ದಿಗ್ಗಜ್ಜ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿಯೂ ಕೆಲಸ ಮಾಡಿದ್ದಾರೆ.
)
ನಾವು ಹೇಳುತ್ತಿರುವ ಆ ನಟಿ ಬೇರೆ ಯಾರೂ ಅಲ್ಲ ಪ್ರಿಯಾಮಣಿ.ವಿದ್ಯಾ ಬಾಲನ್ ಮತ್ತು ಪ್ರಿಯಾಮಣಿ ಸಹೋದರಿಯರು.ಇದನ್ನು ಪ್ರಿಯಾಮಣಿಯೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
)
ವಿದ್ಯಾ ಮತ್ತು ಪ್ರಿಯಾ ಸೋದರ ಸಂಬಂಧಿಗಳು. ಇವರಿಬ್ಬರ ಅಜ್ಜಂದಿರು ಸ್ವಂತ ಸಹೋದರರು.
ಪ್ರಿಯಾಮಣಿ ಅವರ ಪೂರ್ಣ ಹೆಸರು ಪ್ರಿಯಾ ವಾಸುದೇವ್ ಮಣಿ ಅಯ್ಯರ್. ಇವರು ತಮಿಳು ಬ್ರಾಹ್ಮಣರು.ಆದರೆ ಪ್ರೀತಿಗಾಗಿ ಪ್ರಿಯಾ ಧರ್ಮದ ಗೋಡೆಯನ್ನು ದಾಟಿ ಬೇರೆ ಧರ್ಮದವರನ್ನು ವರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮೊದಲು ಭೇಟಿಯಾಗಿದ್ದರು.ಪ್ರಿಯಾ ಕ್ರಿಕೆಟ್ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು.ಮುಸ್ತಫಾ ಈವೆಂಟ್ ಮ್ಯಾನೇಜರ್ ಆಗಿದ್ದರು.ಈ ಭೇಟಿ ನಟರ ಪ್ರೀತಿಗೆ ತಿರುಗಿದೆ.
ಬೇರೆ ಧರ್ಮದವರನ್ನು ವಿವಾಹವಾಗಿದ್ದರೂ ನಾನು ಹುಟ್ಟಿನಿಂದ ಹಿಂದೂ ಯಾವಾಗಲೂ ನನ್ನ ಧರ್ಮವನ್ನು ಅನುಸರಿಸುತ್ತೇನೆ' ಎನ್ನುವುದು ಪ್ರಿಯಾ ಮಾತು. ಯಾರಾದರೂ ಬೇರೆ ಧರ್ಮದವರನ್ನು ಮದುವೆಯಾಗಿದ್ದರೆ,ಅವರು ಧರ್ಮ ಬದಲಾಯಿಸಿದ್ದಾರೆ ಎಂದು ಅರ್ಥವಲ್ಲ ಎನ್ನುವುದು ಇವರ ವಾದ.