Sapthami Gowda: ಟಾಲಿವುಡ್ ಎಂಟ್ರೀ ಬಗ್ಗೆ ಖುಷಿ ಹಂಚಿಕೊಂಡ ಕಾಂತಾರ ಮೂಗುತ್ತಿ ಸುಂದರಿ!
ಕಾಂತಾರ ಖ್ಯಾತಿಯ ಸಪ್ತಮಿ ಗೌಡ, ಇದೀಗ 'ತಮ್ಮುಡು' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿ, ಟಾಲಿವುಡ್ ಅಂಗಳಕ್ಕೆ ಪ್ರವೇಶಿಸುತ್ತಿದ್ದಾರೆ.
ಸಪ್ತಮಿ ಗೌಡ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿರುವ ಇವರು, ಸದ್ಯ ನಟ ನಿತಿನ್ ಮುಂಬರುವ ಚಿತ್ರ 'ತಮ್ಮುಡು' ಮೂಲತ ತೆಲುಗಿಗೆ ಎಂಟ್ರಿ ನೀಡುತ್ತಿದ್ದಾರೆ.
ನಟಿ ಸಪ್ತಮಿ ಗೌಡ ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಫೆಬ್ರುವರಿ ಆರಂಭದಲ್ಲಿ ಸೆಟ್‌ಗೆ ಸೇರಲಿರುವ ನಟಿ, ತೆಲುಗು ಉದ್ಯಮಕ್ಕೆ ಪ್ರವೇಶಿಸುತ್ತಿರುವ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. "ತೆಲುಗು ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ಕುದುರೆ ಸವಾರಿಯಂತಹ ಕೆಲವು ಹೊಸ ಕೌಶಲ್ಯಗಳನ್ನು ಕಲಿಯಲು ನನಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಈ ಮೂಲಕ ನಾನು ಹೊಸ ವರ್ಷವನ್ನು ಪ್ರಾರಂಭಿಸಲು ಉತ್ಸುಕಳಾಗಿದ್ದೇನೆ" ಎಂದಿದ್ದಾರೆ.
ಮೂಗುತ್ತಿ ಸುಂದರಿ ಸಪ್ತಮಿ ಗೌಡ, "ಬಾಲಿವುಡ್ ಅಥವಾ ಟಾಲಿವುಡ್ ಆಗಿರಲಿ, ಯಾವುದೋ ಹೊಸ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ನನಗೆ ಥ್ರಿಲ್ ಎನಿಸುವುದಿಲ್ಲ. ಬದಲಿಗೆ, ದೊಡ್ಡ ಯೋಜನೆಯೊಂದರ ಭಾಗವಾಗುವುದಕ್ಕೆ ನನಗೆ ಸಂತೋಷವಾಗುತ್ತದೆ. ನನಗೆ ಒಂದು ಉದ್ಯಮದೊಂದಿಗೆ ಇನ್ನೊಂದರತ್ತ ಒಲವು ತೋರಲು ಯಾವುದೇ ನಿರ್ದಿಷ್ಟ ಕಾರಣ ಇಲ್ಲ. ಭಾಷೆಯ ಹೊರತಾಗಿ ಉತ್ತಮ ಸಿನಿಮಾಗಳನ್ನು ಮಾಡುವುದರಲ್ಲಿ ನನಗೆ ತೃಪ್ತಿಯಿದೆ" ಎಂದು ಹೇಳಿದ್ದಾರೆ.
ಕಾಂತಾರ ಬೆಡಗಿ ಸಪ್ತಮಿ ಗೌಡ "ಯಾವುದೇ ಉದ್ಯಮಕ್ಕೆ ನಾನು ಸೇರಿಕೊಂಡರೆ ಅಲ್ಲಿಂದ ಕಲಿಯುವುದಕ್ಕೆ ಸಾಕಷ್ಟು ಇರುತ್ತದೆ. ಕಾಂತಾರ ಮತ್ತು ನನ್ನ ಮುಂಬರುವ ಚಿತ್ರ 'ಯುವ' ದಲ್ಲಿ ನಾನು ಅನುಭವಿಸಿದಂತೆ ಹೊಸದನ್ನು ಕಲಿಯುತ್ತೇನೆ ಅಥವಾ ಕೆಲವು ರೀತಿಯ ರೂಪಾಂತರಕ್ಕೆ ಒಳಗಾಗುತ್ತೇನೆ" ಎಂದು ಹೇಳುತ್ತಾರೆ.
ನಟಿ ಸಪ್ತಮಿ ಗೌಡ ತಮ್ಮುಡು ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾ, "ಇದು ಕಮರ್ಷಿಯಲ್ ಚಿತ್ರ, ಆದರೆ ವಿಭಿನ್ನ ಪ್ರಕಾರದ್ದಾಗಿದೆ. ನನಗೆ ಹೆಚ್ಚು ಮುಖ್ಯವಾದುದು ನಾನು ನಿರ್ವಹಿಸುತ್ತಿರುವ ಪಾತ್ರ, ಕಥೆಯ ನಿರೂಪಣೆ ಮತ್ತು ಈ ಪಾತ್ರಕ್ಕಿರುವ ಮಹತ್ವ. ಕೆಲವು ಯೋಜನೆಗಳು ನನಗೆ ಬೆಳೆಯಲು ಸಹಾಯ ಮಾಡುತ್ತವೆ ಮತ್ತು ನಟಿಯಾಗಿ ಮತ್ತೊಂದು ಉದ್ಯಮಕ್ಕೆ ಪ್ರವೇಶಿಸುವುದಕ್ಕೆ ದಾರಿಯನ್ನು ಸುಗಮಗೊಳಿಸುತ್ತವೆ ಎಂದು ನಾನು ನಂಬುತ್ತೇನೆ" ಎಂದು ಮಾತನಾಡಿದ್ದಾರೆ.
ನಟಿ ಸಪ್ತಮಿ ಗೌಡ, "ನಾನು ಕನ್ನಡದಲ್ಲಿ ಕೆಲವು ಉತ್ತಮ ಸ್ಕ್ರಿಪ್ಟ್‌ಗಳಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಈ ವರ್ಷ ಕೆಲವು ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಭರವಸೆ ಇದೆ" ಎಂದು ಕೂಡ ತಿಳಿಸಿದ್ದಾರೆ.