`ನಿಜವಾಗಿಯೂ ಬ್ರೇಕ್ ಅಪ್ ಆಗಿದೆ...` ಜೀವನದ ಟಾಪ್ ಸೀಕ್ರೇಟ್ ರಿವೀಲ್ ಮಾಡಿದ್ರು ಸಪ್ತಮಿ ಗೌಡ
ಕಾಂತಾರ ಚೆಲುವೆ ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ನಟಿ ಸಪ್ತಮಿ ಗೌಡ ಅವರ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಸಂದರ್ಶಕರು ಕೇಳುವ ಕೆಲವು ಪ್ರಶ್ನೆಗೆ ಫಟಾಫಟ್ ಎಂದು ಉತ್ತರಿಸಿದ್ದಾರೆ.
ಫೆವರೆಟ್ ಕ್ರಿಕೆಟ್ ಪ್ಲೇಯರ್ ವಿರಾಟ್ ಕೊಹ್ಲಿ, ಶೂಟಿಂಗ್ ಮಾಡುವ ಸಮಯದಲ್ಲಿನ ಪೆವರೆಟ್ ಸಾಂಗ್ ಕವಿತೆ ಕವಿತೆ , ಬೆಂಗಳೂರಿನಲ್ಲಿ ಇಷ್ಟದ ಅಡ್ಡಾ ಎಂದರೆ ಅದು ನಮ್ಮ ಮನೆ ಎಂದು ಸಪ್ತಮಿ ಹೇಳಿದ್ದಾರೆ.
ವೈ ಫೈಗೆ ಪಾಸ್‌ವರ್ಡ್ ಬಗ್ಗೆ ಕೇಳಿದಾಗ, ಅದು ನನ್ನ ನಾಯಿಯ ಹೆಸರು ಸಿಂಬಾ (simba). ಇದನ್ನೇ ನಾನು ವೈ ಫೈಗೆ ಪಾಸ್‌ವರ್ಡ್ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಸಪ್ತಮಿ ಗೌಡ ಅವರಿಗೆ ಇದೇ ವೇಳೆ ಸಹ ಕಲಾವಿದರ ಜೊತೆ ಲವ್, ಕ್ರಶ್ ಆಗಿದ್ಯಾ ಎಂದು ಕೇಳಲಾಗಿದೆ. ಇದಕ್ಕೆ ಪ್ರೇಕ್ಷಕರನ್ನು ಕನ್ವಿನ್ಸ್ ಮಾಡಬೇಕು ಅಂದ್ರೆ ಭಾವನೆಯನ್ನು ಫೀಲ್ ಮಾಡಿ ತೋರಿಸಬೇಕು. ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದರೆ ಪ್ರೀತಿಲಿ ಬಿದ್ದಂತೆಯೇ ಅಭಿನಯಿಸಬೇಕು ಎಂದಿದ್ದಾರೆ.
ಹಾಗೆಂದು ಲವ್ ಕ್ರಶ್ ಆಗಿದೆ ಅಂತಲ್ಲ. ಬ್ರೇಕಪ್ ಸೀನ್ ಇದ್ದಾಗ ನಿಜವಾಗಿಯೂ ಬ್ರೇಕ್ ಅಪ್ ಆಗಿದೆ ಅನ್ನುವಂತೆ ಮಾಡಿ ತೋರಿಸಬೇಕು ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ.