IPL ಆರಂಭಕ್ಕೂ ಮುನ್ನ ಬದಲಾಯ್ತು Royal Challengers Bangalore ಹೆಸರು: ಇನ್ಮುಂದೆ ಹೀಗಿರಲಿದೆ RCB ಪೂರ್ಣ ‘ಅರ್ಥ’!

Wed, 13 Mar 2024-1:02 pm,

ಮಾರ್ಚ್ 22ರಿಂದ ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್’ನ ಮೊದ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ.

ಅಂದಹಾಗೆ ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮೂಲಕ ಹೆಸರು ಬದಲಾವಣೆಯ ಬಹುದೊಡ್ಡ ಸುಳಿವು ನೀಡಿದೆ. ಮುಂಬರುವ RCB ಅನ್‌ ಬಾಕ್ಸ್ ಈವೆಂಟ್‌’ನಲ್ಲಿ ಸಂಭವನೀಯ ಹೆಸರು ಬದಲಾವಣೆ ಸಾಧ್ಯತೆ ಇದೆ. (ಫೋಟೋ ಕೃಪೆ- Royal Challengers Bangalore X)

2014ರಲ್ಲಿ Bangalore ನಿಂದ Bengaluru ಎಂದು ಅಧಿಕೃತವಾಗಿ ಮರುನಾಮಕರಣಗೊಂಡಾಗಿನಿಂದ, ಆರ್ ಸಿ ಬಿ ಅಭಿಮಾನಿಗಳು ತಮ್ಮ ತಂಡದ ಹೆಸರನ್ನೂ ಸಹ Royal Challengers Bengaluru ಎಂದು ಕರೆಯಲು ಒತ್ತಡ ಹಾಕುತ್ತಿದ್ದರು. ಇದೀಗ ಫ್ರ್ಯಾಂಚೈಸ್ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ ಈ ವಿಷಯದಲ್ಲೇ ಬದಲಾವಣೆ ಮಾಡಲಾಗುತ್ತದೆಯೇ ಏನೋ ಎಂಬ ಅನುಮಾನ ಮೂಡಿದೆ.   (ಫೋಟೋ ಕೃಪೆ- Royal Challengers Bangalore X)

RCB ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಹೆಸರು ಬದಲಾವಣೆಯ ಸುಳಿವು ನೀಡಿದ್ದಾರೆ. ಜೊತೆಗೆ ಸೋಮವಾರ (ಮಾರ್ಚ್ 19) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಅನ್ಬಾಕ್ಸ್ ಸಮಾರಂಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಘೋಷಿಸಲಾಗುತ್ತದೆ ಎಂದು ಹೇಳಲಾಗಿದೆ. 

ಪ್ರೋಮೋ ವೀಡಿಯೊದಲ್ಲಿ, ರಿಷಬ್ ಶೆಟ್ಟಿ ಮೂರು ಕಂಬಳದ ಕೋಣಗಳ ಬಳಿ ಬರುತ್ತಿರುವುದನ್ನು ಕಾಣಬಹುದು. ಆ ಕೋಣಗಳ ಮೇಲೆ ಕೆಂಪು ಬಣ್ಣದ ಬಟ್ಟೆಯಲ್ಲಿ ‘Royal’, ‘Challengers’ ಮತ್ತು ‘Bangalore’ ಎಂದು ಬರೆಯಲಾಗಿದೆ, ಮೊದಲು ‘Royal’ ಮತ್ತು ‘Challengers’ ಎಂದು ಬರೆಯಲಾಗಿದ್ದ ಕೋಣಗಳ ಬಳಿ ಬಂದು ನೋಡಿದ ರಿಷಬ್, ‘Bangalore’ ಎಂದು ಬರೆದಿರುವ ಕೋಣವನ್ನು ಅಲ್ಲಿಂದ ಕರೆದುಕೊಂಡು ಹೋಗುವಂತೆ ಬೇರೊಬ್ಬರಿಗೆ ಸೂಚಿಸುತ್ತಾರೆ. ಆ ಕೋಣ ಅಲ್ಲಿಂದ ಹೋಗುತ್ತಿದ್ದಂತೆ, “ಅರ್ಥ ಆಯ್ತಾ?” ಎಂದು ಪ್ರೇಕ್ಷಕರಿಗೆ ರಿಷಬ್ ಪ್ರಶ್ನೆ ಹಾಕುತ್ತಾರೆ. (ಫೋಟೋ ಕೃಪೆ- Royal Challengers Bangalore X)

ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ? Understood what Rishabh Shetty is trying to say? You’ll find out at RCB Unbox. Buy your tickets now. 🎟️@shetty_rishab #RCBUnbox #PlayBold #ArthaAytha #ನಮ್ಮRCB pic.twitter.com/sSrbf5HFmd

— Royal Challengers Bangalore (@RCBTweets) March 13, 2024

 

 

ಇದು ಆರ್‌ ಸಿ ಬಿ ಅನ್‌ಬಾಕ್ಸ್ ಈವೆಂಟ್‌’ನ ಬಗ್ಗೆ ಅಭಿಮಾನಿಗಳನ್ನು ಉತ್ಸುಕಗೊಳಿಸಿದೆ. ಈ ಸಂದರ್ಭದಲ್ಲಿ ತಂಡದ ಹೊಸ ಜೆರ್ಸಿಯು ಬಹಿರಂಗಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಹಲವು RCB ಅಭಿಮಾನಿಗಳು ಈ ಬದಲಾವಣೆ ಬಗ್ಗೆ ಉತ್ಸುಕರಾಗಿದ್ದು, ವಿಧ ವಿಧವಾದ ಕಾಮೆಂಟ್’ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಫ್ರಾಂಚೈಸಿಯ ಇತ್ತೀಚಿನ ಪೋಸ್ಟ್‌’ಗೆ X ನಲ್ಲಿ ಪ್ರತಿಕ್ರಿಯಿಸಿದ್ದು, ಬೆಂಗಳೂರಿನ ಪ್ರೊ ಕಬಡ್ಡಿ ತಂಡವು, "ಹೆಸರಾಗಲಿ Bengaluru ಉಸಿರಾಗಲಿ RCB" ಎಂದು ಕಾಮೆಂಟ್ ಮಾಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link